ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಪರ್ಕಳದ ದುರ್ಗಾ ನಗರದಲ್ಲಿ ಉದ್ಘಾಟನೆಯ ಮುನ್ನ ಕುಸಿದ ಕೆರೆ
ಉಡುಪಿ:ನಗರಸಭೆ ಮತ್ತು ಉಡುಪಿ ಅಭಿವೃದ್ಧಿಯ ಪ್ರಾಧಿಕಾರದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆಯ ಹಣ ಕೆರೆ ಅಭಿವೃದ್ಧಿಗೆಂದೆ ಮೀಸಲಾಗಿರುವ ಅನುದಾನದಲ್ಲಿ ಸುಮಾರು ಅಂದಾಜು60 ಲಕ್ಷ ವೆಚ್ಚದಲ್ಲಿ ಪರ್ಕಳದ ದುರ್ಗಾ ನಗರದಲ್ಲಿ ನೂತನವಾಗಿ ರಚಿಸಲಾದ ಕೆರೆ ಉದ್ಘಾಟನೆ ಮುನ್ನಕುಸಿದಿದೆ.
ಈ ಕೆರೆ ಮಣ್ಣುಅಗೆಯುವಾಗ ತ್ರಿಶೂಲ ಇರುವ ಕಲ್ಲು ಹಾಗೂ ಅಭಿಶೇಕ ನಡೆದ ತೀರ್ಥ ಹರಿದು ಹೋಗುವ ಕಲ್ಲಿನ ಕೊಂಡಿಸಿಕ್ಕಿದ್ದು . ನಾಥ ಪಂಥಕ್ಕೆ ಸೇರಿದ ವಸ್ತುಗಳಾಗಿದೆ.ಈ ವಸ್ತುಗಳು 12ನೇ ಶತಮಾನಕ್ಕೆ ಸೇರಿರುತ್ತದೆ ಎಂದು ತಿಳಿದುಬಂದಿದೆ.
ಇದೀಗ ಒಂದು ತಿಂಗಳ ಹಿಂದೆ ಈಕೆರೆ ಪೂರ್ಣಗೊಂಡಿದೆ.
ಉದ್ಘಾಟನೆಯ ಯಾಗುವ ಮೊದಲೇ ಕೆರೆ ಕುಸುಯು ತ್ತಿರುವುದು ಕಾಮಗಾರಿಯ ಗುಣ ಪರೀಕ್ಷಿಸಬೇಕಾಗಿದೆ.. ಪರ್ಕಳದ ಸುತ್ತಮುತ್ತ ಬೇರೆ ಬೇರೆ ಇಲಾಖೆಯ ಅನುದಾನದಿಂದ ಕೆರೆ ಅಭಿವೃದ್ಧಿ ಆಗುತ್ತಿರುವುದು. ಮತ್ತೆ ಮತ್ತೆ ಕುಸಿಯುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡುತ್ತಿದೆ. ಅನುದಾನ ತರುವ ಆಯ್ಕೆಯಾದ ಜನಪ್ರತಿನಿಧಿಗಳು. ಹಾಗೂ
ಇಲಾಖಾ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಬೇಕಾಗಿದೆ.