ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
80ರ ವೃದ್ಧನನ್ನು ಪ್ರೀತಿಸಿ ಮದುವೆಯಾದ 23ರ ಯುವತಿ, ಅಪರೂಪದ ಲವ್ ಸ್ಟೋರಿ
ಈ ಪ್ರೀತಿ ಯಾವಾಗ ಹುಟ್ಟುತ್ತೆ ಅನ್ನೋದು ಗೊತ್ತಿಲ್ಲ. ಪ್ರೀತಿ ಹುಟ್ಟುವಾಗ ಜಾತಿ, ಧರ್ಮ, ಅಂತಸ್ತು, ವಯಸ್ಸು ಯಾವುದೂ ಗಮನಕ್ಕೆ ಬರಲ್ಲ. ಹೀಗೆ ಜಾತಿ, ಅಂತಸ್ತು, ವಯಸ್ಸಿನ ಅಂತರವನ್ನೂ ಮೀರಿ ಅದೆಷ್ಟೋ ಜೋಡಿಗಳು ಪ್ರೇಮ ವಿವಾಹವಾಗಿದ್ದಾರೆ. ಅದರಲ್ಲೂ ಇತ್ತೀಚಿಗೆ ಯುವತಿಯರು ತಮಗಿಂತ 15 ರಿಂದ 20 ವರ್ಷ ಹೆಚ್ಚಿನ ವಯಸ್ಸಿನವರನ್ನು ಮದುವೆಯಾಗುವ ಕೆಲವೊಂದು ಸುದ್ದಿಗಳು ಕೇಳಿ ಬರುತ್ತಿರುತ್ತವೆ. ಅದೇ ರೀತಿ ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿ ಕುರುಡಲ್ಲ ಎಂಬ ಮಾತಿನಂತೆ ಇಲ್ಲೊಬ್ಬಳು 23 ವರ್ಷದ ಯುವತಿ 80 ರ ವೃದ್ಧನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.
ಈ ಅಪರೂಪದ ಘಟನೆ ಚೀನಾದ ಹೆಬೈ ಪ್ರಾಂತ್ಯದಲ್ಲಿ ನಡೆದಿದ್ದು, 23 ವರ್ಷದ ಯುವತಿಯೊಬ್ಬಳು ವೃದ್ಧಾಶ್ರಮದಲ್ಲಿನ 80 ವರ್ಷದ ವೃದ್ಧನೊಂದಿಗೆ ಪ್ರೀತಿಯಲ್ಲಿ ಬಿದ್ದು ಆತನನ್ನೇ ಮದುವೆಯಾಗಿದ್ದಾಳೆ. ಹೆಬೈ ಪ್ರಾಂತ್ಯದ ವೃದ್ಧಾಶ್ರಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಕ್ಸಿಯಾಫಾಂಗ್ ಎಂಬಾಕೆ ಅಲ್ಲಿ ಲೀ ಎಂಬ 80 ರ ವೃದ್ಧನ ಪರಿಚಯವಾಗುತ್ತದೆ. ಆ ವೃದ್ಧನ ಪ್ರಬುದ್ಧತೆ, ಬುದ್ಧಿವಂತಿಕೆಗೆ ಆಕರ್ಷಿತಳಾದ ಕ್ಸಿಯಾಫಾಂಗ್ ಆತನ ಪ್ರೀತಿಯಲ್ಲಿ ಬೀಳುತ್ತಾಳೆ. ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಈ ಬಗ್ಗೆ ಕ್ಸಿಯಾಫಾಂಗ್ ತನ್ನ ಕುಟುಂಬದವರ ಬಳಿ ಹೇಳಿದಾಗ ಅವರು ಈಕೆಯ ಈ ನಿರ್ಧಾರಕ್ಕೆ ಒಪ್ಪಲಿಲ್ಲ. ನನಗೆ ಲೀ ಅವರೇ ಬೇಕೆಂದು ಹಠ ಹಿಡಿದ ಕ್ಸಿಯಾಫಾಂಗ್ ತನ್ನ ಕುಟುಂಬದೊಂದಿಗಿನ ಎಲ್ಲಾ ಸಂಬಂಧವನ್ನು ಮುರಿದು ಕೊನೆಗೆ ಲೀ ಅವರನ್ನು ವಿವಾಹವಾಗಿದ್ದಾಳೆ.
ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿ ಕುರುಡಲ್ಲ ಎಂಬ ಮಾತಿನಂತೆ ಈ ಇಬ್ಬರೂ ಇತ್ತೀಚಿಗೆ ಸರಳವಾಗಿ ವಿವಾಹವಾಗಿದ್ದು, ಇಬ್ಬರ ಕುಟುಂಬದವರೂ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಚೀನಾದ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಈ ನವ ದಂಪತಿಗಳ ಪ್ರೇಮ ಕಥೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವರು ಈ ಯುವತಿ ವೃದ್ಧನನ್ನು ಹಣಕ್ಕಾಗಿ ಮದುವೆಯಾಗಿದ್ದಾಳೆ ಎಂದು ಹೇಳಿದರೇ ಇನ್ನೂ ಕೆಲವರು ಆಕೆಯ ನಿಷ್ಕಲ್ಮಶ ಪ್ರೀತಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.