ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಬೆಂಗಳೂರಿಂದ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಊಟದಲ್ಲಿ ಬ್ಲೇಡ್ ಪತ್ತೆ: ದಂಗಾದ ಪ್ರಯಾಣಿಕ
ದೆಹಲಿ, ಜೂನ್ 17: ಏರ್ ಇಂಡಿಯಾ ವಿಮಾನದಲ್ಲಿ ನೀಡಲಾಗುವ ಊಟದಲ್ಲಿ ಬ್ಲೇಡ್ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಊಟದಲ್ಲಿ ಪತ್ತೆಯಾದ ಬ್ಲೇಡ್ ಕಂಡು ಪ್ರಯಾಣಿಕರು ಶಾಕ್ ಆಗಿದ್ದಾರೆ. ಜೂನ್ 9ರಂದು ಬೆಂಗಳೂರಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ವಿಮಾನದಲ್ಲಿ ಘಟನೆ ನಡೆದಿದೆ. ಸದ್ಯ ಏರ್‌ಇಂಡಿಯಾ ವಿಮಾನ ಸಂಸ್ಥೆಗೆ ಪ್ರಯಾಣಿಕ ದೂರು ನೀಡಿದ್ದು, ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯಿಂದ ತನಿಖೆ ನಡೆದಿದೆ.
ಏರ್ ಇಂಡಿಯಾ ವಿಮಾನದಲ್ಲಿ ನೀಡಲಾದ ಊಟದಲ್ಲಿ ಲೋಹದ ತುಂಡು ಒಂದು ಕಾಣಿಸಿದ್ದು, ಅದು ಬ್ಲೇಡ್‌ನಂತೆ ಕಾಣುತ್ತಿತ್ತು. ಕೆಲವು ಸೆಕೆಂಡ್ ಅದನ್ನು ಜಗಿದ ನಂತರವೇ ನನಗೆ ಅದರ ಅನುಭವವಾಯಿತು. ಅದೃಷ್ಟವಶಾತ್, ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಒಂದು ವೇಳೆ ಮಗುವಿಗೆ ತಿನ್ನಿಸುವ ಆಹಾರದಲ್ಲಿ ಈ ರೀತಯಾಗಿ ಲೋಹದ ತುಂಡು ಅಥವಾ ಬ್ಲೇಡ್ ಇದ್ದರೆ ಏನು ಮಾಡುವುದು ಎಂದು ಪ್ರಯಾಣಿಕರು ಫೋಟೋ ಸಹಿತ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ಘಟನೆ ಬಗ್ಗೆ ತನಿಖೆ ನಡೆಸಿದ ಏರ್ ಇಂಡಿಯಾ ನಮ್ಮ ವಿಮಾನವೊಂದರಲ್ಲಿ ಪ್ರಯಾಣಿಕರಿಗೆ ನೀಡಲಾದ ಊಟದಲ್ಲಿ ಬ್ಲೇಡ್ ಪತ್ತೆ ಆಗಿರುವುದನ್ನು ದೃಢಪಡಿಸಿದೆ.ತನಿಖೆ ಮಾಡಲಾಗಿದ್ದು, ಇದು ನಮ್ಮ ಅಡುಗೆದಾರರ ಸೌಲಭ್ಯಗಳಲ್ಲಿ ಬಳಸಲಾದ ತರಕಾರಿ ಸಂಸ್ಕರಣಾ ಯಂತ್ರದಿಂದ ಬಂದಿದೆ ಎಂದು ತಿಳಿದುಬಂದಿದೆ.
ನಾವು ಯಾವುದೇ ಗಟ್ಟಿಯಾದ ತರಕಾರಿಯನ್ನು ಕತ್ತರಿಸಿದ ನಂತರ ಎಲ್ಲವನ್ನು ಪರೀಕ್ಷಿಸಲಾಗುವುದು ಎಂದು ಹೇಳಿದೆ.