ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ರಾಜ್ ಕೋಟ್ ಗೇಮಿಂಗ್ ಝೋನ್ ಅಗ್ನಿ ದುರಂತ: ಮೃತಪಟ್ಟ 28 ಮಂದಿಯಲ್ಲಿ ನವ ವಿವಾಹಿತರು, ವಧುವಿನ ಸೋದರಿ ಸಜೀವ ದಹನ!

ರಾಜ್ ಕೋಟ್: ರಾಜ್‌ಕೋಟ್ ಗೇಮ್ ಝೋನ್ ಬೆಂಕಿ ದುರಂತದಲ್ಲಿ ಮೃತಪಟ್ಟ 28 ಮಂದಿಯಲ್ಲಿ ನವವಿವಾಹಿತ ದಂಪತಿ, ವಧುವಿನ ಸಹೋದರಿ ಕೂಡ ಸೇರಿದ್ದಾರೆ.

ಶನಿವಾರ ಸಂಜೆ ಗುಜರಾತ್‌ನ ರಾಜ್‌ಕೋಟ್‌ನ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 28 ಮಂದಿ ಮೃತಪಟ್ಟಿದ್ದರು. ನವ ವಿವಾಹಿತ ದಂಪತಿಯಾದ ಅಕ್ಷಯ್ ಧೋಲಾರಿಯಾ, ಅವರ ಪತ್ನಿ ಖ್ಯಾತಿ ಮತ್ತು ಸೊಸೆ ಹರಿತಾ ಅವರು ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ಗೆ ಮನರಂಜನೆಗೆಂದು ಹೋಗಿದ್ದರು.

ಕೆನಡಾದಲ್ಲಿ ಓದುತ್ತಿದ್ದ 24 ವರ್ಷದ ಅಕ್ಷಯ್, 20 ವರ್ಷದ ಖ್ಯಾತಿಯನ್ನು ಮದುವೆಯಾಗಲು ರಾಜ್‌ಕೋಟ್‌ಗೆ ಬಂದಿದ್ದರು. ದುರಂತ ಸಂಭವಿಸುವ ಒಂದು ವಾರದ ಮೊದಲಷ್ಟೇ ವಿವಾಹವಾಗಿದ್ದರು. ಅವರ ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ. ಅಕ್ಷಯ್ ಅವರು ಧರಿಸಿದ್ದ ಉಂಗುರದ ಸಹಾಯದಿಂದ ಗುರುತಿಸಲಾಗಿದೆ.

ಪೊಲೀಸರು ಖ್ಯಾತಿ ಮತ್ತು ಹರಿತಾ ಅವರ ಗುರುತನ್ನು ಖಚಿತಪಡಿಸಲು ಅವರ ಪೋಷಕರಿಂದ ಡಿಎನ್‌ಎ ಮಾದರಿಗಳನ್ನು ಕೇಳಿದ್ದಾರೆ.

ಕೇವಲ 99 ರೂಪಾಯಿಗಳ ಟಿಕೆಟ್‌ ದರದ ವಾರಾಂತ್ಯದ ರಿಯಾಯಿತಿಯ ಕೊಡುಗೆಯಿಂದಾಗಿ ಗೇಮಿಂಗ್ ಝೋನ್ ಜನರಿಂದ ತುಂಬಿಹೋಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ, ಆದರೆ ನಿಖರವಾದ ಕಾರಣ ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. .

ಅಧಿಕಾರಿಗಳ ಪ್ರಕಾರ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ ಕಳೆದುಹೋದ 28 ಜೀವಗಳಲ್ಲಿ, ಅವರಲ್ಲಿ ನಾಲ್ವರು 12 ವರ್ಷದೊಳಗಿನ ಮಕ್ಕಳು ಸೇರಿದ್ದಾರೆ.

No Comments

Leave A Comment