`````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಓದುಗರಿಗೆ ಮತ್ತು ನಮ್ಮ ಜಾಹೀರಾತುದಾರರಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು``````````````

ಗಾಜಾದ ನಿರಾಶ್ರಿತರ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್; 35 ಮಂದಿ ಸಾವು

ಗಾಜಾ, ಮೇ 27 : ಇಸ್ರೇಲ್ ಗಾಜಾದ ನಿರಾಶ್ರಿತರ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಕ್ಕಳು ಸೇರಿ 35 ಜನ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ತೀನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಹಮಾಸ್ ರಾಕೆಟ್ ದಾಳಿ ನಡೆಸಿದ ಬಳಿಕ ಇಸ್ರೇಲ್ ರಾಫಾ ಮೇಲೆ ದೊಡ್ಡ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲಿ ವಾಯುಪಡೆಯು ಭಯೋತ್ಪಾದಕ ಸಣಘಟನೆ ಹಮಾಸ್‌ನ ರಫಾ ಸಂಕೀರ್ಣದ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ವೆಸ್ಟ್ ಬ್ಯಾಂಕ್ ಪ್ರಧಾನ ಕಚೇರಿಯ ಮುಖ್ಯಸ್ಥ ಯಾಸಿನ್ ರಬಿಯಾ ಹಾಗೂ ಮತ್ತೋರ್ವ ಭಯೋತ್ಪಾದಕ ಕಮಾಂಡರ್ ಖಾಲಿದ್ ನಜ್ಜಾರ್ ಸಾವನ್ನಪ್ಪಿದ್ದಾರೆ. ಇನ್ನು ಕಮಾಂಡರ್‌ಗಳ ಸಾವಿನಿಂದ ಹಮಾಸ್ ಆಘಾತಕ್ಕೊಳಗಾಗಿದ್ದು, ರಫಾದಲ್ಲಿ ಇಸ್ರೇಲ್ ಸೇನೆಯ ವಿರುದ್ಧ ಪ್ರತಿಭಟನೆ ಮಾಡುವಂತೆ ಹಮಾಸ್ ಪ್ಯಾಲೆಸ್ತೀನ್ ಜನರಿಗೆ ಹೇಳಿದೆ.

ಇಸ್ರೇಲಿ ಬಾಂಬ್ ದಾಳಿಯ ಪರಿಣಾಮವಾಗಿ 35 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ ಹಲವಾರು ಪ್ಯಾಲೆಸ್ತೀನ್ ನಾಗರಿಕರು ಗಾಯಗೊಂಡಿದ್ದಾರೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ತಿಳಿಸಿದೆ.

No Comments

Leave A Comment