ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಉದ್ಯಾವರ ಶ್ರೀ ವೀರವಿಠ್ಠಲ ದೇವಳದ ಮೂಕ್ತೇಸರರಾಗಿದ್ದ ನಾಗೇಶ್ ಕಾಮತ್ ನಿಧನ
ಉಡುಪಿ: ಉದ್ಯಾವರ ಶ್ರೀ ವೀರವಿಠ್ಠಲ ದೇವಳದ ಮೂಕ್ತೇಸರರಾಗಿದ್ದ ನಾಗೇಶ್ ಕಾಮತ್ ಇವರು ಭಾನುವಾರ ಇಂದು ಮುಂಜಾನೆ ತೀವ್ರ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅತೀ ಸಣ್ಣ ವಯಸ್ಸಿನಲ್ಲಿ ನಿಧಾನ ಹೊ೦ದಿದ್ದಾರೆ.
ಇವರ ನಿಧನವು ಅವರ ಕುಟುಂಬಕ್ಕೆ, ನಮ್ಮ ಸಮಾಜಕ್ಕೆ, ನಮ್ಮ ದೇವಳಕ್ಕೆ ತುಂಬಲಾಗದ ನಷ್ಟ. ಅವರು ಶ್ರೀ ವೀರವಿಠ್ಠಲ ದೇವಳದ ಮುಕ್ತೇಸರರಾಗಿ ಸರಿ ಸುಮಾರು 15 ವರ್ಷ ಸೇವೆಯನ್ನು ಸಲ್ಲಿಸಿದ್ದರು . ಅವರ ಈ ಸಮಯದಲ್ಲಿ ದೇವಳದಲ್ಲಿ ಹಿಂದೆಂದೂ ನಡೆಯದ, ಮುಂದೆಯೂ ನಡೆಯಲಸಾಧ್ಯವಾದ development ಕೆಲಸಗಳು ನಡೆದದನ್ನು ನಾವು ಸ್ಮರಿಸಬಹುದಾಗಿದೆ.
ಅವರ ಪಾರ್ಥಿವ ಶರೀರವನ್ನು ನಾಳೆ ಅಂತ್ಯಕ್ರಿಯೆಗಾಗಿ ಉದ್ಯಾವರಕ್ಕೆ ತರಲಾಗುವುದು.