ಮೈಸೂರಲ್ಲಿ ಹುಲಿ ದಾಳಿ: ಮೇಕೆ ಮೇಯಿಸುತ್ತಿದ್ದ ಮಹಿಳೆಯನ್ನು ತಿಂದು ತೇಗಿದ ವ್ಯಾಘ್ರ
ಮೈಸೂರು, (ಮೇ 26): ರೈತ ಮಹಿಳೆ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಅಲ್ಲಿನ ಮೂರ್ಬಾಂದ್ ಬೆಟ್ಟದ ಸಮೀಪದಲ್ಲಿ ನಡೆದಿದೆ. ಹುಲಿ ದಾಳಿಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ. ಚಿಕ್ಕಿ (48) ಹುಲಿ ದಾಳಿಗೆ ಬಲಿಯಾದ ಮಹಿಳೆ. ಎಚ್.ಡಿ.ಕೋಟೆ ತಾಲ್ಲೂಕು ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿ. ಮೇಕೆ ಮೇಯಿಸುತ್ತಿದ್ದಾಗ ಹಠಾತ್ ಮಹಿಳೆ ಮೇಲೆ ಹುಲಿ ದಾಳಿ ಮಾಡಿದೆ. ಘಟನಾ ಸ್ಥಳಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಘಟನಾ ಸ್ಥಳದಲ್ಲಿ ಮಹಿಳೆಯ ಕಾಲು ಮಾತ್ರ ಸಿಕ್ಕಿದೆ. ಆದ್ರೆ, ಮಹಿಳೆಯ ಮೃತದೇಹಕ್ಕಾಗಿ ಸಿಬ್ಬಂದಿ ಹುಡುಕಾಟ ನಡೆಸಿದ್ದು, ಅರಣ್ಯಇಲಾಖೆ ನಿರ್ಮಿಸಿದ್ದ ಅರಣ್ಯ ವೀಕ್ಷಣೆಯ ಟವರ್ ಮೇಲೆ ಮಹಿಳೆಯ ಮೃತದೇಹ ಪತ್ತೆಯಾಗಿದೆ.