ಧರ್ಮಸ್ಥಳದಿಂದ ಹಿಂದಿರುಗುವಾಗ ಭೀಕರ ರಸ್ತೆ ಅಪಘಾತ – ನಾಲ್ವರ ದಾರುಣ ಸಾವು
ಚಿಕ್ಕಮಗಳೂರು: ಮೆಸ್ಕಾಂ ಲಾರಿ, ಓಮಿನಿ ನಡುವೆ ಮುಖಾಮುಖಿ ನಡೆದ ಘಟನೆ ಬಣಕಲ್-ಕೊಟ್ಟಿಗೆಗಾರ ಮಧ್ಯೆ ನಡೆದಿದೆ.
ಮೆಸ್ಕಾಂ ಲಾರಿ, ಓಮ್ನಿ, ಆಲ್ಟೋ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಸರಣಿ ಅಪಘಾತಕ್ಕೆ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಾಲ್ವರು ದಾರುಣವಾಗಿ ಸಾವನ್ನಪ್ಪಿರೋ ವರದಿಯಾಗಿದೆ.
ಓಮಿನಿಯಲ್ಲಿದ್ದ ಮೃತರೆಲ್ಲರೂ ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದರು. ಮೆಸ್ಕಾಂ ಲಾರಿ ಚಿಕ್ಕಮಗಳೂರಿನ ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಹೋಗುತ್ತಿತ್ತು. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಬಣಕಲ್-ಕೊಟ್ಟಿಗೆಗಾರ ಮಧ್ಯೆ ಈ ಅಪಘಾತ ಸಂಭವಿಸಿದ್ದು, ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾರೆ.