ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕಾರಿನ ವ್ಯವಹಾರ-ಉಡುಪಿಯಲ್ಲಿ ಕಾಪುವಿನ ಮುಸ್ಲಿ೦ಯುವಕರ ತ೦ಡಗಳಿ೦ದ ಭೀಕರ ತಲವಾರು ಕಾಳಗ-ಕಾರಿನಡಿಗೆ ಬಿದ್ದು ಒಬ್ಬ ಯುವಕನ ದಾರುಣಸಾವು

ಉಡುಪಿ: ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ಮೇ೧೮ರ ಶನಿವಾರದ೦ದು ನಡೆದಿದ್ದು ತಡವಾಗಿ ತಿಳಿದು ಬಂದಿದೆ.

ಕಾಪು ಮೂಲದ ಎರಡು ತಂಡಗಳ ಯುವಕರು ಉಡುಪಿ – ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿನ ಶಾರದಾ ಕಲ್ಯಾಣಮ೦ಟಪದ ತಿರುವುವಿನ ರಿಕ್ಷಾ ನಿಲ್ದಾಣದ ಬಳಿ ಕಾರುಗಳಲ್ಲಿ ಬಂದು‌ ಜಗಳ ಮಾಡಿಕೊಂಡು ಕಾರಿನಲ್ಲಿಯೇ ಹೊಡೆದಾಟ ಮಾಡಿಕೊಂಡಿರುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ.

ಮೇ 18ರಂದು ನಡೆದಿರುವ ಈ ಘಟನೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಕಾಪು ಮೂಲದ ಎರಡು ಮುಸ್ಲಿಂ ಯುವಕರ ತಂಡದ ನಡುವೆ ಜಗಳ ನಡೆದಿದೆ.

ಗರುಡ ಗ್ಯಾಂಗ್ ಮತ್ತು ಶರೀಫ್ ನಡುವೆ ಹೊಡೆದಾಟ ಸಂಭವಿಸಿದೆ.ನಂತರ ಕಾರುಗಳ ನಡುವೆ ಢಿಕ್ಕಿ ಹೊಡೆದುಕೊಂಡು ಹೊಡೆದಾಟ ನಡೆಸಿದ್ದಾರೆ.

ಈ ಗಲಾಟೆಯಲ್ಲಿ ಒಬ್ಬ ಯುವಕ ಗಂಭೀರ ಗಾಯಗೊಂಡಿದ್ದು ನಂತರ ಆಸ್ಪತ್ರೆಗೆ ಆ ಯುವಕನನ್ನು ದಾಖಲಿಸಿದಾಗ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ವಿಡಿಯೋ ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸ್ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದಲ್ಲಿ ಬಳಕೆಯಾಗಿದ್ದ 2 ಕಾರು, ಒಂದು ಬೈಕ್, ತಲ್ವಾರ್ ಹಾಗೂ ಡ್ಯಾಗರ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೇ ರೀತಿ ಉಡುಪಿಯ ನಗರಸಭೆಯ ಕಕ್ಕು೦ಜೆ ವಾರ್ಡಿನ ಸದಸ್ಯನೊಬ್ಬನು ತ೦ಡವೊ೦ದನ್ನು ಕಟ್ಟಿಕೊ೦ಡು ಗ್ಯಾರೇಜು ಮಾಲಿಕನ ಮತ್ತು ಅವನ ಹೆ೦ಡತಿಯ ಮೇಲೆ ಹಾಡುಹಗಲೇ ಮಾರಣಾ೦ತಿಕ ಹಲ್ಲೆಯನ್ನು ನಡೆಸಿದ ಘಟನೆ ಕೆಲವು ದಿನಗಳ ಹಿ೦ದೆ ನಡೆದಿತ್ತು,
ಇ೦ತಹ ಘಟನೆಗಳು ರಾಜರೋಷವಾಗಿ ನಡೆಯುತ್ತಿದ್ದರೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸುಮ್ಮನಿರುವುದು ಭಾರೀ ಸ೦ಶಯಕ್ಕೆ ಕಾರಣವಾಗಿದೆ ಎ೦ದು ಜನರು ಬೀದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ,

No Comments

Leave A Comment