ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಅಂಜಲಿಯನ್ನು ಹತ್ಯೆಗೈದು, ರೈಲಿನಲ್ಲಿ ಮಹಿಳೆಗೂ ಚಾಕುವಿನಿಂದ ಚುಚ್ಚಿದ್ದ ಆರೋಪಿ ವಿಶ್ವನ ಟ್ರಾವೆಲ್​ ಹಿಸ್ಟ್ರಿ ಇಲ್ಲಿದೆ

ದಾವಣಗೆರೆ, ಮೇ 17: ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಿಲಿ ಅಂಬಿಗೇರ (20)  ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿ ವಿಶ್ವ ವಿರುದ್ಧ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರೈಲಿನಲ್ಲಿ ನನ್ನನ್ನು ಕೆಟ್ಟದಾಗಿ ನೋಡುತ್ತಿದ್ದನು. ನಂತರ ಚಾಕುವಿನಿಂದ ಚುಚ್ಚಿದ್ದಾನೆ ಎಂದು ಗದಗ  ಮೂಲದ ಲಕ್ಷ್ಮಿ ಎಂಬವರು ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ.

ಅಂಜಲಿ ಕೊಲೆಗೈದು ಮಹಿಳೆಗೆ ಚಾಕುವಿನಿಂದ ಇರಿತ

ಬುಧವಾರ ಮೇ 15ರ ತಮ್ಮ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದ ಹುಬ್ಬಳ್ಳಿ ಜನರಿಗೆ ಬೆಳ್ಳಂ ಬೆಳಿಗ್ಗೆ ಅದೊಂದು ಸುದ್ದಿ ಅಘಾತ ಉಂಟು ಮಾಡಿತು. ಅದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಜ್ಜಿ ಮತ್ತು ತಂಗಿಯೊಂದಿಗೆ ವಾಸಿಸುತ್ತಿದ್ದ ಅಂಜಲಿ ಅಂಬಗೇರ (20) ಕೊಲೆ. ಶೋಕಿಗಾಗಿ ಕಳ್ಳತನ ಆರೋಪಿ ವಿಶ್ವ ಆರೋಪಿ ವಿಶ್ವ ಅಲಿಯಾಸ್​ ಗಿರೀಶ್ ಮೈಸೂರಲ್ಲಿ ಮಹಾರಾಜ್ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದನು.

ಕೊಲೆಯಾದ ಅಂಜಲಿ ಮತ್ತು ಆರೋಪಿ ವಿಶ್ವ ಸಹಪಾಠಿಗಳಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಅಂಜಲಿ ವಾರದ ಹಿಂದೆ ವಿಶ್ವ ಬಳಿ ಎರಡು ಸಾವಿರ ಹಣ ಕೇಳಿದ್ದಳು. ಆಗ ಆರೋಪಿ ವಿಶ್ವ ಅಂಜಲಿಗೆ ಒಂದು ಸಾವಿರ ರೂಪಾಯಿ ಪೋನ್ ಪೇ ಮಾಡಿದ್ದನು.

ಆ ನಂತರ ಅಂಜಲಿ ವಿಶ್ವನ ನಂಬರ್ ಬ್ಲಾಕ್ ಲೀಸ್ಟ್ ಹಾಕಿದ್ದಳು. ವಿಶ್ವ ಎಷ್ಟೇ ಕರೆ ಮಾಡಿದರು ಅಂಜಲಿ ಪೋನ್ ರೀಸಿವ್ ಮಾಡುತ್ತಿರುಲಿಲ್ಲ. ಇದರಿಂದ ವಿಶ್ವ ಸಿಟ್ಟಿಗೆದ್ದು ಮೇ 15 ರಂದು ನಸುಕಿನ ಜಾವ ಮೈಸೂರಿ‌ಂದ ಹುಬ್ಬಳ್ಳಿಗೆ ಬಂದಿದ್ದಾನೆ. ಹುಬ್ಬಳ್ಳಿ ಹೊಸ ನಿಲ್ದಾಣದಲ್ಲಿ ಬಸ್​ ಇಳಿದುಕೊಂಡು, 250 ರೂಪಾಯಿಗೆ ಆಟೋ ಬಾಡಿಗೆ ಪಡೆದಿದ್ದಾನೆ. ಆಟೋ ಚಾಲಕನಿಗೆ ಪ್ರಯಾಣಿಸುತ್ತಿರುವಾಗಲೇ ಹಣ ನಿಡಿದ್ದಾನೆ. ಆಟೋದಲ್ಲಿ ವೀರಾಪೂರ ಓಣಿಯಲ್ಲಿರುವ ಅಂಜಲಿ ಮನೆಗೆ ಬಂದಿದ್ದಾನೆ. ಬಳಿಕ ಆಟೋದವನು ಸ್ಥಳದಿಂದ ತೆರಳಿದ್ದಾನೆ. ಬಳಿಕ ಎರಡೇ ನಿಮಿಷದಲ್ಲಿ ಅಂಜಲಿಯನ್ನು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದನು.

ಕೊಲೆ ಮಾಡಿದ ಬಳಿಕ ವಿಶ್ವ ಮತ್ತೆ ಹೊಸ ಬಸ್ ನಿಲ್ದಾಣಕ್ಕೆ ಬಂದು ಬಸ್​ ಹತ್ತಿ ಹಾವೇರಿಗೆ ಹೋಗಿದ್ದಾನೆ. ಹಾವೇರಿಯಲ್ಲಿ ಮೈಸೂರು ರೈಲು ಹತ್ತಿದ್ದಾನೆ. ರೈಲಿನಲ್ಲಿ ಬಿಹಾರ ವ್ಯಕ್ತಿಯೊಬ್ಬನ ಮೊಬೈಲ್​ನಲ್ಲಿ ಯಾವುದೋ ಪೋಟೋ ನೋಡಿದ್ದಾನೆ. ಮೈಸೂರಿಗೆ ತಲುಪಿದ ಬಳಿಕ ತಾನು ಕೆಲಸ ಮಾಡುತ್ತಿದ್ದ ಮಹರಾಜ್ ಹೋಟೆಲ್​ನಲ್ಲಿ ಮಲಗಿದ್ದನು.

ಆರೋಪಿ ವಿಶ್ವ ಕಳೆದ 15 ದಿನಗಳಿಂದ ಮೊಬೈಲ್​ ಬಳಕೆ ಮಾಡಿರಲಿಲ್ಲ. ಅದೇನು ತಿಳಿಯಿತು ಆರೋಪಿ ವಿಶ್ವ ಪೊಲೀಸರಿಗೆ ಶರಣಾಗಲು ಹುಬ್ಬಳ್ಳಿಗೆ ಬರಲು ನಿರ್ಧರಿಸಿದ್ದಾನೆ. ಹೀಗಾಗಿ ಆರೋಪಿ ವಿಶ್ವ ಮೈಸೂರಿನಿಂದ ಅರಸಿಕೇರೆಗೆ ಬಂದು, ಇಲ್ಲಿ ವಿಶ್ವಮಾನ ಎಕ್ಸಪ್ರೆಸ್​ ಜನರಲ್​ ಬೋಗಿ ಹತ್ತಿದ್ದಾನೆ. ಇದೇ ರೈಲಿನಲ್ಲಿ ತುಮಕೂರಿನಿಂದ ದಂಪತಿ ಬರುತ್ತಿದ್ದರು. ಅರಸಿಕೆರೆಯಲ್ಲಿ ರೈಲು ಹತ್ತಿದ ನಂತರ ಆರೋಪಿ ವಿಶ್ವ ಮಹಿಳೆಯನ್ನು ಕೆಟ್ಟ ದೃಷ್ಟಯಿಂದ ನೋಡುತ್ತಿದ್ದನು. ರೈಲು ಚಿಕ್ಕಜಾಜೂರಿನ ನಿಲ್ದಾಣಕ್ಕೆ ಬಂದಾಗ ಮಹಿಳೆ ಶೌಚಕ್ಕೆ ಹೋದರು. ಈ ವೇಳೆ ಆರೋಪಿ ವಿಶ್ವ ಮಹಿಳೆಯನ್ನು ಹಿಂಬಾಲಿಸಿದ್ದಾನೆ.

ಬಳಿಕ ಶೌಚಾಲಯದ ಕಿಂಡಿಯಿಂದ ಒಳಗಡೆ ಇಣುಕಿ ನೋಡಿದ್ದಾನೆ. ಇದನ್ನು ಗಮನಿಸಿದ ಮಹಿಳೆ ನಿನಗೆ ಅಕ್ಕ-ತಂಗಿಯವರಿಲ್ಲ ಎಂದು ದಬಾಯಿಸಿದ್ದಾರೆ. ಆಗ ವಿಶ್ವ ಮಹಿಳೆಗೆ ಚಾಕು ತೋರಿಸಿ ಹೊಟ್ಟೆಗೆ ಚುಚ್ಚಲು ಮುಂದಾಗಿದ್ದಾನೆ. ಆಗ ಮಹಿಳೆ ಏಡಗೈ ಮುಂದೆ ತಂದಿದ್ದರಿಂದ ಚಾಕು ಕೈಗೆ ತಾಗಿದೆ. ಬಳಿಕ ಮಹಿಳೆ ಪತಿಯನ್ನು ಕರೆದಿದ್ದಾರೆ. ಅಷ್ಟೊತ್ತಿಗಾಗಲೆ ರೈಲು ದಾವಣಗೆರೆ ನಿಲ್ದಾಣ ತಲುಪಿತ್ತು. ಸ್ಥಳಕ್ಕೆ ಮಹಿಳೆಯ ಪತಿ ಹಾಗೂ ಸಾರ್ವಜನಿಕರು ಬರುವಷ್ಟರಲ್ಲಿ ರೈಲಿನಿಂದ ಜಿಗಿದು, ಓಡಿ ಹೋಗುತ್ತಿದ್ದನು.

ಕೂಡಲೆ ಅಲ್ಲಿನ ಸಾರ್ವಜನಿಕರು ಆತನನ್ನು ಹಿಮ್ಮೆಟ್ಟಿ ಹಿಡಿದಿದ್ದಾರೆ. ಬಳಿಕ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಬಂದು ಆರೋಪಿ ವಿಶ್ವನನ್ನು ವಶಕ್ಕೆ ಪಡೆದು, ಆಸ್ಪತ್ರೆಗೆ ದಾಖಲಸಿದ್ದಾರೆ. ಮಹಿಳೆಯನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬಳಿಕ ಪೊಲೀಸರಿಗೆ ಆರೋಪಿ ವಿಶ್ವ ಬಗ್ಗೆ ತಿಳಿದಿದೆ. ಅಂಜಲಿ ಕೊಲೆ ಪ್ರಕರಣ ಆರೋಪಿ ಎಂದು ತಿಳಿದ ಕೂಡಲೆ, ಮಾಹಿತಿಯನ್ನು ಹುಬ್ಬಳ್ಳಿ ಪೊಲೀಸರಿಗೆ ತಿಳಿಸಲಾಗಿದೆ. ಬಳಿಕ ದಾವಣಗೆರೆ ಪೊಲೀಸರು ಇಂದು (ಮೇ 17) ಆರೋಪಿ ವಿಶ್ವನನ್ನು ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ವಿಶ್ವನನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.

kiniudupi@rediffmail.com

No Comments

Leave A Comment