ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಸ್ಲೋವಾಕಿಯಾ ಪ್ರಧಾನಿ ಮೇಲೆ ಗುಂಡಿನ ದಾಳಿ, ಗಂಭೀರ

ಸ್ಲೋವಾಕಿಯಾ: ಮೇ 16: ಐರೋಪ್ಯ ಒಕ್ಕೂಟ ಸ್ಲೋವಾಕಿಯಾ ದೇಶದ ಪ್ರಧಾನ ಮಂತ್ರಿ ರಾಬರ್ಟ್‌ ಫಿಕೊವರ ಮೇಲೆ ಆಗಂತುಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹ್ಯಾಂಡ್ಲೋವಾ ನಗರದಲ್ಲಿ ಕ್ಯಾಬಿನೆಟ್ ಸಭೆಯ ನಂತರ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡು ಹಾರಿಸಲಾಗಿದ್ದು, ತಕ್ಷಣ ಅವರ ಅಂಗರಕ್ಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಷ್ಯಾ ಪರ ನಿಲುವು ಹೊಂದಿರುವ ಫಿಕೋ ಅವರ ಮೇಲೆ ಹಲವಾರು ಬಾರಿ ಗುಂಡು ಹಾರಿಸಲಾಗಿದೆ.

ರಾಜಧಾನಿ ಪ್ರೇಗ್‍ನಿಂದ ಈಶಾನ್ಯಕ್ಕೆ ಸುಮಾರು 140 ಕಿಲೋಮೀಟರ್ (85 ಮೈಲುಗಳು) ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದ ಸಾಂಸ್ಕೃತಿಕ ಕೇಂದ್ರದ ಹೊರಗೆ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದ ಫಿಕೋ ಅವರ ಮೇಲೆ ಕನಿಷ್ಠ ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ.

ಶಂಕಿತ ಬಂದೂಕುಧಾರಿಯನ್ನು ತಕ್ಷನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

No Comments

Leave A Comment