ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಬಸ್ಸು-ಲಾರಿ ಡಿಕ್ಕಿ: 6 ಮಂದಿ ಸಜೀವ ದಹನ
ಪಲ್ನಾಡು(ಆಂಧ್ರ ಪ್ರದೇಶ): ಬಸ್ಸು ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸು ಸಂಪೂರ್ಣ ಹೊತ್ತಿ ಉರಿದು ಆರು ಮಂದಿ ಸಜೀವ ದಹನವಾದ ಪ್ರಕರಣ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಬುಧವಾರ ನಸುಕಿನ ಜಾವ ನಡೆದಿದೆ.
ಗಾಯಗೊಂಡವರಿಗೆ ಚಿಲಕಲುರಿಪೆಟ್ ಪಟ್ಟಣದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಗುಂಟೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಪ್ರಯಾಣಿಕರನ್ನು ಅಂಜಿ(35ವ), ಉಪ್ಪ್ ಗುಂಡೂರು ಕಾಶಿ(65ವ), ಉಪ್ಪುಗುಂಡೂರ್ ಲಕ್ಷ್ಮಿ(55ವ) ಮತ್ತು ಮುಪ್ಪರಾಜು ಖ್ಯಾತಿ ಸೈಶ್ರಿ(8ವ) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಆಂಧ್ರ ಪ್ರದೇಶದ ಬಾಪಟ್ಲ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಇನ್ನುಳಿದ ಇಬ್ಬರು ಮೃತರ ಗುರುತು ಪತ್ತೆಯಾಗಬೇಕಿದೆ.
ಬಸ್ಸಿನಲ್ಲಿ ಒಟ್ಟು 42 ಪ್ರಯಾಣಿಕರು ಚುನಾವಣೆಯಲ್ಲಿ ಮತದಾನ ಮಾಡಿ ಪ್ರಯಾಣಿಸುತ್ತಿದ್ದರು. ಎಂದು ಗಾಯಗೊಂಡವರು ತಿಳಿಸಿದ್ದಾರೆ. ಮೃತರಲ್ಲಿ ಬಸ್ಸು ಮತ್ತು ಲಾರಿ ಚಾಲಕ ಮತ್ತು ಇತರ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಚಿಲಕಲುರಿಪೆಟ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
ಬಸ್ಸು ಚಿನ್ನಗಂಜಮ್ ನಿಂದ ಹೈದರಾಬಾದ್ ಗೆ ಪ್ರಯಾಣಿಸುತ್ತಿತ್ತು. ಅಪಘಾತದಲ್ಲಿ ಎರಡೂ ವಾಹನಗಳು ಸಂಪೂರ್ಣವಾಗಿ ಹಾನಿಯಾಗಿದೆ.