ಹರಿಯಾಣ, ಗೋವಾ, ಲಡಾಖ್ಗೆ ಹೊಸ ರಾಜ್ಯಪಾಲರ ನೇಮಕ....Poster ಅಂಟಿಸುವ ಮುನ್ನ ಎಚ್ಚರ; Bengaluru Auto Driversಗೆ ಮತ್ತೆ ಶಾಕ್ ಕೊಟ್ಟ RTO ಅಧಿಕಾರಿಗಳು! 5 ಸಾವಿರ ದಂಡ!
ಲಂಡನ್‌ನಲ್ಲಿ ಭಾರತೀಯ ಮೂಲದ ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ
ವಾಷಿಂಗ್ಟನ್, ಮೇ. 15:ಭಾರತೀಯ ಮೂಲದ ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ವಾಯುವ್ಯ ಲಂಡನ್ ನ ಬಸ್ ನಿಲ್ದಾಣದಲ್ಲಿ ನಡೆದಿರುವುದಾಗಿ ವರದಿಯಿಂದ ತಿಳಿದು ಬಂದಿದೆ.
ಈ ಘಟನೆ ಮೇ 9ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 22 ವರ್ಷದ ಯುವಕನನ್ನು ಬಂಧಿಸಿ, ಕೊಲೆ ಆರೋಪ ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ವಿವರಿಸಿದೆ.
ಮೃತ ಮಹಿಳೆಯನ್ನು ಅನಿತಾ ಮುಖೈ (೬೬) ಎಂದು ಗುರುತಿಸಲಾಗಿದೆ. ಈಕೆ ನ್ಯಾಷನಲ್ ಹೆಲ್ತ್ ಸರ್ವೀಸ್ ನಲ್ಲಿ ಮೆಡಿಕಲ್ ಸೆಕ್ರೆಟರಿಯಾಗಿ(ಪಾರ್ಟ್‌ಟೈಮ್) ಕಾರ್ಯನಿರ್ವಹಿಸುತ್ತಿದ್ದರು. ಲಂಡನ್ ನ ಎಡ್ಗೇ ರ್ ಪ್ರದೇಶದ ಬ್ರಂಟ್ ಓಕ್ ಬ್ರಾಡ್ ವೇ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ದಿಢೀರನೆ ಬಂದು ಚೂರಿಯಿಂದ ಇರಿದಿರುವುದಾಗಿ ತಿಳಿದು ಬಂದಿದೆ.