Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಜಪಾನ್ ನೌಕಾಪಡೆಯ 2 ಹೆಲಿಕಾಪ್ಟರ್‌ಗಳು ಪತನ- ಓರ್ವ ಸಾವು, ಏಳು ಮಂದಿ ನಾಪತ್ತೆ

ಟೋಕಿಯೊ, ಏ. 21,ಜಪಾನ್ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಶನಿವಾರ ಪೆಸಿಫಿಕ್ ಸಾಗರದಲ್ಲಿ ಪತನಗೊಂಡಿವೆ. ಈ ಹೆಲಿಕಾಪ್ಟರ್‌ಗಳಲ್ಲಿ ಒಟ್ಟು ಎಂಟು ಮಂದಿ ಸಿಬ್ಬಂದಿ ಇದ್ದರು. ಅದರಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಪಾನ್‌ನ ಸ್ವ-ರಕ್ಷಣಾ ಪಡೆ (ಎಸ್‌ಡಿಎಫ್) ವಕ್ತಾರರು ಶನಿವಾರ ತಡರಾತ್ರಿ ಘಟನೆಯನ್ನು ದೃಢಪಡಿಸಿದ್ದು, ಆರಂಭದಲ್ಲಿ ವ್ಯಕ್ತಿ ಒಬ್ಬನನ್ನು ರಕ್ಷಿಸಲಾಗಿದೆ ಆದರೆ ನಂತರ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ.

ಎರಡು ಎಸ್ಎಚ್-60ಕೆ ಹೆಲಿಕಾಪ್ಟರ್‌ ರಾತ್ರಿ ತರಬೇತಿ ವೇ ಳೆ, ಟೋ‍ಕಿಯೊದ ದಕ್ಷಿಣ ಪೆಸಿಫಿಕ್ ಮಹಾಸಾಗರದ ತೊರಿಶಿಮಾದ್ವೀ ಪದ ಬಳಿ ತಡವಾಗಿ ಸಂಪರ್ಕ ಕಳೆದುಕೊಂಡಿತು ಎಂದು ರಕ್ಷಣಾ ಸಚಿವ ಮಿನೋ ರು ಕಿಹರಾ ಸುದ್ದಿಗಾರರಿಗೆ ತಿಳಿಸಿದರು.

No Comments

Leave A Comment