ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ನೇಹಾ ಕೊಲೆ ಪ್ರಕರಣ: ಅವಳು ನನ್ನ ಜೊತೆ ಮಾತಾಡಲ್ಲ ಅಂದಳು, ಅದಕ್ಕೆ ಚಾಕು ಹಾಕಿದೆ; ಆರೋಪಿ ಫಯಾಜ್​

ಹುಬ್ಬಳ್ಳಿ, ಏಪ್ರಿಲ್​ 21: ಗುರುವಾರ (ಏ.18) ರಂದು ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಬಿವಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ  ಕೊಲೆಯಾಗಿದೆ. ಕೊಲೆ ಆರೋಪಿ ಫಯಾಜ್​ನನ್ನು ಪೊಲೀಸರು ಬಂಧಿಸಿ, ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದಾರೆ. ಕಾರಾಗೃಹದಲ್ಲಿ ಆರೋಪಿ ಫಯಾಜ್ ಸಿಬ್ಬಂದಿ ಎದುರು ಕೊಲೆ ಕಾರಣವನ್ನು ಬಾಯಿಟ್ಟಿದ್ದು, ಈ ಮಾಹಿತಿ ಟಿವಿ9ಗೆ ಲಭ್ಯವಾಗಿದೆ. “ಅವಳು  ನನ್ನ ಜೊತೆ ಮಾತನಾಡಲ್ಲ ಅಂದಳು, ಅದಕ್ಕೆ ನಾನು ಚಾಕು ಹಾಕಿದೆ” ಎಂದು ಫಯಾಜ್​ ಕಾರಾಗೃಹ ಸಿಬ್ಬಂದಿ ಎದುರು ಹೇಳಿದ್ದಾನೆ. ಅಲ್ಲದೆ ಅವತ್ತು ಏನೆಲ್ಲ ಘಟನೆ ನಡೆಯಿತು ಎಂಬುವುದನ್ನು ವಿವರಿಸಿದ್ದಾನೆ.

ಘಟನೆ ನಡೆಯುವುದಕ್ಕೂ ಮುಂಚೆಯೇ ಕಾಲೇಜು ಬಿಟ್ಟಿದ್ದೆ. ಒಂದು ವಾರದ ಹಿಂದೆ ಕಾಲೇಜ್​ಗೆ ಹೋಗಿ ನೇಹಾಳನ್ನು ಮಾತನಾಡಿಸಲು ಯತ್ನಿಸಿದೆ. ಆದರೆ ಅವಳು (ನೇಹಾ) ನಿನ್ನ ಜೊತೆ ಮಾತನಾಡಲು ಇಷ್ಟ ಇಲ್ಲ ಅಂತ ಅವೈಡ್ ಮಾಡಿ, ಹೊರಟು ಹೋದಳು”.

“ಏಪ್ರಿಲ್​ 18 ರಂದು ಅವಳು ಪರೀಕ್ಷೆ ಬರೆಯಲು ಬಿವಿಬಿ ಕಾಲೇಜಿಗೆ ಬಂದಿದ್ದಳು. ನಾನು (ಫಯಾಜ್​) ಮತ್ತೆ ಅಂದು ಕಾಲೇಜಿಗೆ ಹೋದೆ. ಪರೀಕ್ಷೆ ಮುಗಿಯುವವರೆಗೂ ಕಾಯ್ದೆ. ಪರೀಕ್ಷೆ ಮುಗಿದ ಬಳಿಕ ಹೊರಗೆ ಬಂದ ಅವಳನ್ನು ಮಾತನಾಡಿಸಲು ಯತ್ನಿಸಿದೆ. ಆದರೆ ಅವಳು ಮಾತಾಡಲ್ಲ ಅಂದಳು. ಹೀಗಾಗಿ ಅವಳಿಗೆ ಚಾಕುವಿನಿಂದ ಹತ್ತು ಬಾರಿ ಚುಚ್ಚಿದೆ. ಅವಳಿಗೆ ಚಾಕು ಹಾಕುವ ವೇಳೆ ನನ್ನ ಎರಡು ಕೈ ಬೆರಳುಗಳಿಗೆ, ಕಾಲಿಗೂ ಗಾಯವಾಗಿದೆ. ಏನಾಗಿದೆ ಅನ್ನೋದು ಗೊತ್ತಿಲ್ಲ, ಅವಳು ಮಾತಾಡಲ್ಲ ಅಂದಳು ನಾನು ಚಾಕು ಹಾಕಿದ್ದೇನೆ” ಎಂದು ಕಾರಾಗೃಹ ಸಿಬ್ಬಂದಿ ಎದುರು ಫಯಾಜ್​ ಹೇಳಿದ್ದಾನೆ.

ಲವ್ ಆ ತರಹ ಏನೂ ಇರಲಿಲ್ಲ, ಒಳ್ಳೆ ಹುಡಗಿ

ನೇಹಾಳ ಕುರಿತು ನೇಹಾ ಮನೆಯ ಮುಂಭಾಗದಲ್ಲಿರುವ ಮುಸ್ಲಿಂ ಕುಟುಂಬ ಮಾತನಾಡಿ, ಹಿಂದೂ ಮುಸ್ಲಿಂ ಬೇಧ ಬಾವ ಇಲ್ಲದೆ ನಾವಿದ್ದೇವೆ. ನೇಹಾ ತಾಯಿ ನಮ್ಮ ಜೊತೆ ವಾಕಿಂಗ್ ಬರುತ್ತಾ ಇದ್ದರು. ನೇಹಾ ನಮ್ಮ ಜೊತೆ ಬಹಳ ಚೆನ್ನಾಗಿ‌ ಮಾತಾಡತಿದ್ದರು. ಅವರ ಮನೆಯಲ್ಲಿ ಹಬ್ಬ ಇದ್ದರೆ ನಾವು ಹೋಗತಿದ್ವಿ. ನಮ್ಮ ಮನೆಯಲ್ಲಿ ಹಬ್ಬ ಇದ್ದರೆ ಅವರು ಬರುತ್ತಿದ್ದರು. ಎಲ್ಲರೊಂದಿಗೆ ನೇಹಾ ಚೆನ್ನಾಗಿದ್ದಳು ಎಂದು ಹೇಳಿದರು.

ಲವ್ ಆ ತರಹ ಏನೂ ಇರಲಿಲ್ಲ, ಒಳ್ಳೆ ಹುಡಗಿ. ನೇಹಾ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

No Comments

Leave A Comment