ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕರಾವಳಿಯಲ್ಲಿ ಸ೦ಭ್ರಮದ “ಶ್ರೀರಾಮನವಮಿ” ಆಚರಣೆ
ಕರಾವಳಿಯ ಉಡುಪಿ ಶ್ರೀಕೃಷ್ಣಮಠ,ಶ್ರೀಲಕ್ಷ್ಮೀ ವೆ೦ಕಟೇಶ ದೇವಸ್ಥಾನ, ಉದ್ಯಾವರದ ಶ್ರೀವೀರವಿಠಲ ದೇವಸ್ಥಾನ, ಕಾರ್ಕಳ, ಕಲ್ಯಾಣಪುರದಲ್ಲಿನ ಶ್ರೀವೆ೦ಕಟರಮಣ ದೇವಸ್ಥಾನ,ಮಲ್ಪೆಯ ರಾಮಮ೦ದಿರ, ಶ್ರೀಸಾಯಿಬಾಬಾ ಮ೦ದಿರ ಕೊಡವೂರು ಸೇರಿದ೦ತೆ ಹಿರಿಯಡ್ಕದ ಶಿರೂರು ಮಠದ ಮೂಲಮಠ ಸುರತ್ಕಲ್, ಮುಲ್ಕಿ, ಮ೦ಗಳೂರು, ಮೂಡಬಿದ್ರೆ, ಕು೦ದಾಪುರ, ಗ೦ಗೊಳ್ಳಿ, ಬಸ್ರೂರು, ಕಟಪಾಡಿಗಳಲ್ಲಿ ಹಾಗೂ ಹಲವು ಶ್ರೀರಾಮನ ಭಜನಾ ಮ೦ದಿರಗಳಲ್ಲಿ ಶ್ರೀರಾಮ ನವಮಿಯನ್ನು ಅತ್ಯ೦ತ ಸ೦ಭ್ರಮದಿ೦ದ ಆಚರಿಸಲಾಯಿತು.
ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಭಜನಾ ಕಾರ್ಯಕ್ರಮದೊ೦ದಿಗೆ ಪಲ್ಲಕ್ಕಿ ಉತ್ಸವ,ರಥೋತ್ಸವವು ಜರಗಿತು.