ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಮಂಗಳೂರು: ಅಡ್ಯಾರ್ ಹೆದ್ದಾರಿಯಲ್ಲಿ ಬೈಕ್ ಗೆ ಢಿಕ್ಕಿ ಹೊಡೆದ ಕಾರು :ಬೈಕ್‌ ಸವಾರ ಮೃತ್ಯು

ಮಂಗಳೂರು: ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನ ಬಳಿ ನಡೆದಿದೆ.

ಬೈಕ್‌ ಸವಾರ ಸಾವಿಯೊ ಮಹೇಶ್ (21) ಮೃತಪಟ್ಟವರು. ಅಪಘಾತದಲ್ಲಿ ಸಹಸವಾರ ಪ್ರಣಮ್ ಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಯುವಕರಿಬ್ಬರು ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಗೇಟ್ ಎದುರಿನ ತೆರೆದ ರಸ್ತೆ ವಿಭಜಕದ ಬಳಿ ಬೈಕಿನಲ್ಲಿ ‘ಯು ಟರ್ನ್ ತೆಗೆದು ಮುಂದೆ ಸಾಗುತ್ತಿದ್ದರು. ಅಷ್ಟರಲ್ಲಿ ಬಿ.ಸಿ.ರೋಡ್‌ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರು ಅವರ ಬೈಕಿಗೆ ಡಿಕ್ಕಿ ಹೊಡೆದಿತ್ತು. ಮಹೇಶ್ ಅವರ ಮೂಗು, ಎಡ ಕೈ, ಎಡ ಕಾಲಿನ ಗಂಟು ಹಾಗೂ ತಲೆಯ ಹಿಂಭಾಗಕ್ಕೆ ತೀವ್ರ ಸ್ವರೂಪದ ರಕ್ತ ಗಾಯಗಳಾಗಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಸ್ಥಳದಲ್ಲಿದ್ದವರು ಅವರನ್ನು ವಾಹನವೊಂದರಲ್ಲಿ ವೆನ್ಲಾಕ್‌ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲೇ ಗಾಯಾಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ‌ ಸಹಸವಾರ ಪ್ರಣಮ್ ಶೆಟ್ಟಿ ಅವರ ತಲೆಗೆ, ಬಲಕೈಗೆ, ಎಡ ತೋಳಿಗೆ, ಎಡಮೊಣ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಅವರನ್ನು ನಾಸಿರ್ ಎಂಬುವರು ತಮ್ಮ ಆಟೊರಿಕ್ಷಾದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಸಿರ್ ನೀಡಿದ ದೂರಿನನ್ವಯ ಕಾರು ಚಾಲಕ ಶ್ಯಾಮ್ ಸುಧೀರ್ ವಿರುದ್ಧ ನಗರ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment