ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಚಾಮರಾಜನಗರ: ಜಲಾಶಯದಲ್ಲಿ ಮುಳುಗುತ್ತಿದ್ದ ತಾಯಿಯನ್ನು ರಕ್ಷಿಸಲು ಹೋದ ಮಕ್ಕಳಿಬ್ಬರು ಸೇರಿ ಮೂವರು ಜಲಸಮಾಧಿ
ಚಾಮರಾಜನಗರ: ಗೋಪಿನಾಥಂ ಜಲಾಶಯದಲ್ಲಿ ಬಟ್ಟೆ ತೊಳೆಯಲು ಹೋಗಿ ಮೂವರು ನೀರುಪಾಲಾದ ದಾರುಣ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಮೃತರನ್ನು ಪುದೂರು ಗ್ರಾಮದ ನಿವಾಸಿ 33 ವರ್ಷದ ಮೀನಾ, 13 ವರ್ಷದ ಪವಿತ್ರ ಮತ್ತು 12 ವರ್ಷದ ಕೀರ್ತಿ ಎಂದು ಗುರುತಿಸಲಾಗಿದೆ. ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಟ್ಟೆ ತೊಳೆಯುತ್ತಿದ್ದ ಮೀನಾ ಆಕಸ್ಮಿಕವಾಗಿ ಕಾಲು ಜಾರಿ ಜಲಾಶಯಕ್ಕೆ ಬಿದ್ದಿದ್ದಾರೆ. ಇನ್ನು ತಾಯಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದನ್ನು ನೋಡಿದ ಮಕ್ಕಳು ತಾಯಿಯನ್ನು ರಕ್ಷಿಸಲು ಮುಂದಾಗಿದ್ದು ನೀರಿನ ಸೆಳೆತಕ್ಕೆ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.