ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...
ಬೆಂಗಳೂರಿನ ಆರ್ ಟಿ ನಗರದ ಕಟ್ಟಡದಲ್ಲಿ ಅಗ್ನಿ ಅವಘಡ: 13 ಮಂದಿಯ ರಕ್ಷಣೆ, ಇಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಬೆಂಗಳೂರು: ಬೇಸಿಗೆಯ ಬಿರು ಬಿಸಿಲಿನ ಮಧ್ಯೆ ಬೆಂಗಳೂರಿನ ಆರ್.ಟಿ.ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಮಿರಾಕಲ್ ಡ್ರಿಂಕ್ಸ್ ಮತ್ತು ಐಡಿಎಸ್ ಕಟ್ಟಡದ ನೆಲಮಹಡಿಯಲ್ಲಿ ಐಟಿ ಕಂಪೆನಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡು ನಂತರ ಮೇಲಿನ ಮಹಡಿಗೆ ವ್ಯಾಪಿಸಿತು. ಕಟ್ಟಡವಿಡೀ ಹೊಗೆ ತುಂಬಿಕೊಂಡು ಒಳಗೆ ಸಿಕ್ಕಿಹಾಕಿಕೊಂಡಿದ್ದವರು ಉಸಿರಾಟ ಸಮಸ್ಯೆ ಕಾಣಿಸಿತು. ಅಗ್ನಿ ಸುರಕ್ಷತಾ ವ್ಯವಸ್ಥೆಯಿದ್ದರಿಂದ ಐಟಿ ಕಂಪೆನಿಯ ಸಿಬ್ಬಂದಿಗೆ ಅಗ್ನಿ ಸುರಕ್ಷತೆ ಬಗ್ಗೆ ಮೊದಲೇ ತರಬೇತಿ ನೀಡಿದ್ದರಿಂದ ಇಂದಿನ ಅವಘಡ ವೇಳೆ ಸಮಯಪ್ರಜ್ಞೆ ಮೆರೆದು ಪ್ರಾಣಾಪಾಯ ಅನಾಹುತ ತಪ್ಪಿಹೋಯಿತು. ಹಲವು ಸಿಬ್ಬಂದಿ ಕಟ್ಟಡದ ಮೇಲ್ಛಾವಣಿಗೆ ದೌಡಾಯಿಸಿದರು.