Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಬೆಂಗಳೂರು: ರೂಂನ ಬಿಲ್ ಕೊಡುವ ವಿಚಾರ OYO Roomನಲ್ಲಿ ರೌಡಿಶೀಟರ್, ಸುಪಾರಿ ಕಿಲ್ಲರ್ ನ ಬರ್ಬರ ಕೊಲೆ

ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್, ಸುಪಾರಿ ಕಿಲ್ಲರ್ ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಕಮ್ಮನಹಳ್ಳಿಯ ಓಯೋ ಹೋಟೆಲ್ ರೂಂನಲ್ಲಿ ಸ್ನೇಹಿತರ ಜೊತೆ ರೌಡಿಶೀಟರ್ ದಿನೇಶ್ ತಂಗಿದ್ದನು.

ಆದರೆ ರೂಂನ ಬಿಲ್ ಕೊಡುವ ವಿಚಾರದಲ್ಲಿ ಜಗಳವಾಗಿ ಏಳು ಮಂದಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

No Comments

Leave A Comment