ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಸಂಕಷ್ಟದಲ್ಲಿ ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿ: ಸಂಪರ್ಕಕ್ಕೇ ಸಿಗದ ಬಿಜೆಪಿ ಶಾಸಕ, ಸಂಸದರು!

ಕಾರವಾರ: ಮಾರ್ಚ್​, 28. ಲೋಕಸಭೆ ಚುನಾವಣೆಗೆ (Lok Sabha Election) ಉತ್ತರ ಕನ್ನಡ (Uttara Kannada) ಲೋಕಸಭಾ ಕ್ಷೇತ್ರದ ಬಿಜೆಪಿ (BJP) ಟಿಕೆಟ್ ಗಿಟ್ಟಿಸಿಕೊಂಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿಗೆ (Vishweshwar Hegde Kageri) ಇದೀಗ ಸಂಕಷ್ಟ ಎದುರಾಗಿದೆ. ಚುನಾವಣೆ ದೃಷ್ಟಿಯಿಂದ ಶಾಸಕರು, ಸಂಸದರ ಬೆಂಬಲ ಪಡೆಯಲು ಮುಂದಾದರೆ ಅವರೆಲ್ಲ ಕಾಗೇರಿಗೆ ಸಂಪರ್ಕಕ್ಕೇ ಸಿಗುತ್ತಿಲ್ಲ ಎನ್ನಲಾಗಿದೆ. ಶಾಸಕ, ಸಂಸದರ ಮನವೋಲಿಸುವುದೇ ಬಿಜೆಪಿ ಅಭ್ಯರ್ಥಿ ಕಾಗೇರಿಗೆ ದೊಡ್ಡ ಸವಾಲಾಗಿದೆ. ಯಾರು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಹಾಗೆಂದು ಮನೆಗೆ ಹೋದರೆ ಗೇಟನ್ನೇ ತೆರೆಯುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ಕಾಗೇರಿಯವರ ಸದ್ಯದ ಪರಿಸ್ಥಿತಿ ನೋಡಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಡಿಕೊಳ್ಳುತ್ತಿದ್ದಾರೆ.

ಹಾಲಿ ಸಂಸದ ಸಂಸದ ಅನಂತಕುಮಾರ್ ಹೆಗಡೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಕಾರ್ಯಕರ್ತರಿಗೂ ಸಿಗದಂತೆ ಇದ್ದಾರೆ. ಟಿಕೆಟ್ ತಪ್ಪುವ ಸುಳಿವು ಸಿಕ್ಕಿದ ಕೂಡಲೇ ಅವರು ಮೌನಕ್ಕೆ ಶರಣಾಗಿದ್ದರು. ಟಿಕೆಟ್ ಘೋಷಣೆಯಾಗುವುದಕ್ಕೂ ಮೂರ್ನಾಲ್ಕು ದಿನಗಳ ಮೊದಲಿನಿಂದಲೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇಷ್ಟೇ ಅಲ್ಲದೆ, ಕಾರ್ಯಕರ್ತರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಮನೆಗೆ ಯಾರೆ ಬಂದರೂ ಒಳಕ್ಕೆ ಬಿಡದಂತೆ ಸಂಸದ ಹೆಗಡೆ ಸೆಕ್ಯೂರಿಟಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದೀಗ ಸಂಸದರ ಮೌನ ಹಾಗೂ ಸಂಪರ್ಕಕ್ಕೆ ಸಿಗದಿರುವುದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ತಲೆ ನೋವಾಗಿ ಪರಿಣಮಿಸಿದೆ.

ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ್ದ ಕಾಗೇರಿ, ನಾನು ಮತ್ತು ಅನಂತಕುಮಾರ್ ಹೆಗಡೆ ಜೋಡೆತ್ತುಗಳಂತೆ ಕೆಲಸ ಮಾಡಲಿದ್ದೇವೆ. ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ ಎಂದಿದ್ದರು. ಆದರೆ, ಕಾಗೇರಿ ಭೇಟಿಗೂ ಅವಕಾಶ ನೀಡದೇ, ಕರೆಯೂ ಸ್ವೀಕರಿಸದೇ ಹೆಗಡೆ ಸಂಪೂರ್ಣ ಮೌನವಾಗಿದ್ದಾರೆ.

ಹೆಗಡೆ ಮನೆ ಗೇಟ್ ಬಳಿ ಅರ್ಧ ಗಂಟೆ ಕಾದ ಕಾಗೇರಿ

ಈ ಮಧ್ಯೆ, ಸಂಸದ ಅನಂತಕುಮಾರ್ ಹೆಗಡೆ ಮನೆ ಬಳಿ ಹೋಗಿ ಕಾಗೇರಿ ಅರ್ಧ ಗಂಟೆ ಕಾದರೂ ಸೌಜನ್ಯಕ್ಕೂ ಗೇಟ್ ತೆರೆಸಿ ಅವರ ಬಳಿ ಮಾತನಾಡಿಲ್ಲ ಎಂಬುದು ಗೊತ್ತಾಗಿದೆ. ಅನಂತಕುಮಾರ್ ಹೆಗಡೆ ಸಹಕಾರ ಇಲ್ಲದೆ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಭಾರಿ ಕಷ್ಟ ಎಂದೂ ಹೇಳಲಾಗುತ್ತಿದೆ. ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಕೂಡ ಹೆಗಡೆ ಇದೇ ರೀತಿ ಮೌನವಾಗಿದ್ದಕ್ಕೆ ಕಾಗೇರಿ ಸೋಲನುಭವಿಸಬೇಕಾಗಿ ಬಂದಿತ್ತು. ಇದೀಗ ಮತ್ತೆ ಹೆಗಡೆ ಮೌನವಾಗಿರುವುದು ಕಾಗೇರಿ ಆತಂಕಕ್ಕೆ ಕಾರಣವಾಗಿದೆ.

ಅತ್ತ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಕೂಡ ಕಾಗೇರಿ ಕೈಗೆ ಸಿಗದೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಬುಧವಾರ ಯಲ್ಲಾಪುರದಲ್ಲೇ ಬಿಜೆಪಿ ಅಭ್ಯರ್ಥಿ ಪರ ಸಭೆ ನಡೆದರೂ ಶಿವರಾಂ ಹೆಬ್ಬಾರ್ ಗೈರಾಗಿದ್ದರು.

kiniudupi@rediffmail.com

No Comments

Leave A Comment