Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಮಂಡ್ಯ ಜನರು ಘಟಾನುಘಟಿ ನಾಯಕರನ್ನೇ ಸೋಲಿಸಿದ್ದಾರೆ, ಕುಮಾರಸ್ವಾಮಿ ಯಾವ ಲೆಕ್ಕ: ಕದಲೂರು ಉದಯ್

ಮಂಡ್ಯ, ಮಾರ್ಚ್​ 27: ಮಂಡ್ಯ ಜನರು ಘಟಾನುಘಟಿ ನಾಯಕರನ್ನೇ ಸೋಲಿಸಿದ್ದಾರೆ. ಇನ್ನು ಹೆಚ್​ಡಿ ಕುಮಾರಸ್ವಾಮಿ ಯಾವ ಲೆಕ್ಕ ಎಂದು ಶಾಸಕ ಕದಲೂರು ಉದಯ್ (uday km kadaluru) ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಅವರು, ಜಿ.ಮಾದೇಗೌಡ, ನಟ ಅಂಬರೀಶ್​ರಂಥವರೇ ಸೋತಿದ್ದಾರೆ. ಯಾವುದೋ ಊರಿಂದ ಬಂದ ಕುಮಾರಸ್ವಾಮಿ ಯಾವ ಲೆಕ್ಕ. ಮಂಡ್ಯ ಜಿಲ್ಲೆಗೂ H.D.ಕುಮಾರಸ್ವಾಮಿಗೂ ಏನು ಸಂಬಂಧ? ಈ ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ನಮ್ಮ ಸರ್ಕಾರ ಅಭಿವೃದ್ಧಿ ಮಾಡುತ್ತಿದೆ. ಸ್ಟಾರ್ ಚಂದ್ರು ದುಡ್ಡು ಮಾಡಲು ರಾಜಕೀಯಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

ಹಿಂದಿನಿಂದಲೂ ಮಂಡ್ಯ ಜನಕ್ಕೆ ಅನ್ಯಾಯ ಆಗಿದೆ. ಜೆಡಿಎಸ್​ಗೆ ಬೆಂಬಲ ಕೊಟ್ಟಿದ್ದರು, ಕಾಂಗ್ರೆಸ್ ಪಕ್ಷವನ್ನ ಸಂಪೂರ್ಣವಾಗಿ ಸೋಲಿಸಿದರು. ಅವರೆಲ್ಲ ಗೆದ್ದರು, ಮುಖ್ಯಮಂತ್ರಿಯಾದರಾ, ಮೂರ್ನಾಲ್ಕು ಜನ ಮಂತ್ರಿಗಳು ಕೂಡ ಆದರು. ಯಾವ ಶಾಸಕರಾದರೂ ಏನಾದರೂ ಕೆಲಸ ಮಾಡಿದ್ದಾರಾ? ಕುಮಾರಸ್ವಾಮಿ ಯಾರು ಎಂದು ಪ್ರಶ್ನಿಸಿದ್ದಾರೆ.

ನಾನು ಕೂಡ ಸೇವಾ ಮನೋಭಾವದಿಂದ ರಾಜಕೀಯಕ್ಕೆ ಬಂದಿದ್ದೇನೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜಿಲ್ಲೆಯ ಜನತೆ ಕೈ ಹಿಡಿಯುತ್ತಾರೆ ಎಂದು ಹೆಚ್​ಡಿ  ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

ಏಪ್ರಿಲ್ 4ರಂದು ಹೆಚ್​ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

ಮಂಡ್ಯ ಕ್ಷೇತ್ರ ಗೆಲ್ಲಲು ದಳಪತಿಗಳು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಏಪ್ರಿಲ್ 4ರಂದು ಹೆಚ್​ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮೈತ್ರಿ ಕಾರ್ಯಕರ್ತರನ್ನ ಸೇರಿಸೋ ಮೂಲಕ ಶಕ್ತಿ ಪ್ರದರ್ಶನ ಮಾಡಲು ಪ್ಲಾನ್ ಮಾಡಿದ್ದಾರೆ. ರೋಡ್ ಶೋ ಮೂಲಕ ದಳಪತಿಗಳು ಮತಯಾಚನೆ ನಡೆಸಲಿದ್ದಾರೆ.

ಇನ್ನು ಕುಮಾರಸ್ವಾಮಿ ಸ್ಪರ್ಧೆಗೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಸಿಎಂ ಆಗಿದ್ದಾಗ ಮಗನನ್ನೇ ಗೆಲ್ಲಿಸೋಕೆ ಆಗಿಲ್ಲ. ಈಗ ಇವರ ಸೋಲು ನಿಶ್ಚಿತ ಅಂತಾ ಗುಡುಗಿದ್ದಾರೆ. ಇತ್ತ ಪ್ರಿಯಾಂಕ್ ಖರ್ಗೆ, ನಂಬಿಸಿ ಕೈಕೊಡೋದೇ ಬಿಜೆಪಿಯವರ ಗುಣ‌. ಪಾಪಾ ಸುಮಲತಾ ಅಂತಾ ವ್ಯಂಗ್ಯವಾಡಿದ್ದಾರೆ.

No Comments

Leave A Comment