ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಚೈತ್ರ ಗ್ಯಾಂಗ್ನಿಂದ ವಂಚನೆ ಪ್ರಕರಣ: ಸಾಕ್ಷಿ ಹೇಳದಂತೆ ವ್ಯಕ್ತಿ ಮೇಲೆ ಹಲ್ಲೆ
ಚಿಕ್ಕಮಗಳೂರು, ಮಾ.27: ಚೈತ್ರಾ(Chaitra) ಗ್ಯಾಂಗ್ನಿಂದ ಉದ್ಯಮಿಗೆ ಬಿಜೆಪಿ ಟಿಕೆಟ್(BJP Ticket) ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ತೆಗೆದುಕೊಂಡು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಧನರಾಜ್ ಎಂಬಾತ ಬೇಲ್ ಮೇಲೆ ಜೈಲಿನಿಂದ ಹೊರಬಂದು ಸಾಕ್ಷಿ ಹೇಳಿದರೆ ಕೊಲೆ ಮಾಡುವುದಾಗಿ ಸಲೂನ್ ಮಾಲೀಕ ರಾಮು ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ನ್ಯಾಯಕ್ಕಾಗಿ ಎಸ್ಪಿ ಕಚೇರಿ ಮೊರೆ ಹೋದ ರಾಮು ಕುಟುಂಬ
ಕಳೆದ ತಿಂಗಳು ಬೇಲ್ ಮೇಲೆ ಜೈಲಿನಿಂದ ಹೊರಬಂದಿರುವ ಧನರಾಜ್ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಸೋಮವಾರ(ಮಾ.25) ಕಡೂರಿನ ಹೋಟೆಲ್ನಲ್ಲಿ ಹಲ್ಲೆ ನಡೆದಿರುವ ಸಂಬಂಧ ರಾಮು ಅವರು ಬೀರೂರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ದೂರು ನೀಡಿದರೂ ಕೂಡ ಬೀರೂರು ಠಾಣೆಯ ಪೊಲೀಸರು ಮಾತ್ರ ಪ್ರಕರಣ ದಾಖಲಿಸಿಲ್ಲ. ಈ ಹಿನ್ನಲೆ ನ್ಯಾಯಕ್ಕಾಗಿ ರಾಮು ಕುಟುಂಬ ಎಸ್ಪಿ ಕಚೇರಿ ಮೊರೆ ಹೋಗಿದ್ದಾರೆ .
ಇನ್ನು ಚೈತ್ರಾ ವಂಚನೆ ಪ್ರಕರಣದಲ್ಲಿ ಗೋಪಾಲ್ ಜೀ ಪಾತ್ರ ಸೃಷ್ಟಿಸಿ ಕಡೂರಿನ ರಾಮು ಸಲೂನ್ನಲ್ಲಿ ಚೆನ್ನಾ ನಾಯ್ಕಗೆ ಧನರಾಜ್ ಮೇಕಪ್ ಮಾಡಿಸಿದ್ದ. ಈ ಹಿನ್ನಲೆ ವಂಚನೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ರಾಮುವಿಗೆ ಸಾಕ್ಷಿ ಹೇಳದಂತೆ ಬೆದರಿಕೆ ಒಡ್ಡಿದ್ದಾನೆ. ಇದೀಗ ಪ್ರಕರಣ ದಾಖಲಿಸದ ಬೀರೂರು ಪೊಲೀಸರ ವಿರುದ್ಧ ರಾಮು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ನ್ಯಾಯಕ್ಕಾಗಿ ಎಸ್ಪಿ ವಿಕ್ರಮ್ ಆಮ್ಟೆ ಮೊರೆ ಹೋಗಿದ್ದಾರೆ. ಈ ಕುರಿತು ಚಿಕ್ಕಮಗಳೂರು ನಗರದ ಎಸ್ಪಿ ಕಚೇರಿಯಲ್ಲಿ ದೂರು ನೀಡಿದ್ದಾರೆ.