ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ವಾಯುಪಡೆಯ ಮಾಜಿ ಮುಖ್ಯಸ್ಥ ಬದೌರಿಯಾ ಬಿಜೆಪಿಗೆ ಸೇರ್ಪಡೆ
ನವದೆಹಲಿ: ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಆರ್ ಕೆ ಎಸ್ ಬದೌರಿಯಾ (ನಿವೃತ್ತ) ಭಾನುವಾರ ಬಿಜೆಪಿಗೆ ಸೇರ್ಪಡೆಯಾದರು. ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್, ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಇವರು ಬಿಜೆಪಿಗೆ ಸೇರ್ಪಡೆಯಾದರು. ನಿವೃತ್ತ ಏರ್ ಚೀಪ್ ಮಾರ್ಷಲ್ ಆದ ಬದೌರಿಯಾ ಉತ್ತರ ಪ್ರದೇಶದವರು, ಅಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳನ್ನು ಬಿಜೆಪಿ ಇನ್ನೂ ಪ್ರಕಟಿಸಿಲ್ಲ. ಬದೌರಿಯಾ ಅವರಿಗೆ ಅವಕಾಶ ನೀಡುವ ಮೂಲಕ ರಾಷ್ಟ್ರ ಸೇವೆಗೆ ಅವರ ಕೊಡುಗೆ ಬಳಸಿಕೊಳ್ಳಲು ಉದ್ದೇಶಿಸಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬದೌರಿಯಾ, ತಮ್ಮ ಸೇವೆಯಲ್ಲಿ ಕಳೆದ ಎಂಟರಿಂದ 10 ವರ್ಷಗಳನ್ನು ‘ಸುವರ್ಣ ಅವಧಿ’ ಎಂದು ಬಣ್ಣಿಸಿದರು. ಸ್ವಾವಲಂಬನೆಯನ್ನು ಹೆಚ್ಚಿಸಲು ಮತ್ತು ಸಶಸ್ತ್ರ ಪಡೆಗಳನ್ನು ಆಧುನೀಕರಿಸಲು ಮೋದಿ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಶ್ಲಾಘಿಸಿದರು. ವಿವಿಧ ಇಲಾಖೆಗಳಾದ್ಯಂತ ತೆಗೆದುಕೊಂಡ ಕ್ರಮಗಳು ದೇಶವ ಬಲಿಷ್ಠವಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಭಾರತೀಯ ವಾಯುಪಡೆಯಲ್ಲಿ ಬದೌರಿಯಾ ಅವರ ಸುದೀರ್ಘ ಸೇವೆಯನ್ನು ಠಾಕೂರ್ ಹಾಗೂ ತಾವ್ಡೆ ಶ್ಲಾಘಿಸಿದರು. ಮತ್ತು ರಕ್ಷಣಾ ಪಡೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ ನಂತರ ಈಗ ಅವರು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೊಡುಗೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬದೌರಿಯಾ ಅವರು ಐಎಎಫ್‌ನಲ್ಲಿ ಸುಮಾರು 40 ವರ್ಷಗಳನ್ನು ಕಳೆದಿದ್ದಾರೆ .