Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಇ೦ದು ಮಾ.24.ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ರಜತ ಕಲಶ ಮತ್ತು ಶಿಲಾನ್ಯಾಸದ ಶಿಲೆಗಳ ಭವ್ಯ ಮೆರವಣಿಗೆ

ಉಡುಪಿ:ಶ್ರೀ ವೆಂಕಟರಮಣ ದೇವಸ್ಥಾನ ಕಲ್ಯಾಣಪುರ ಇದರ ನಿಧಿ ಕಲಶ ಪೂರ್ವಕ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವಭಾವಿಯಾಗಿ ತಾ.24-03-2024 ನೇ ಆದಿತ್ಯವಾರ ಇ೦ದು ವಿಶೇಷ ಸಾಂಪ್ರದಾಯಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಂಜೆ 5.00 ಕ್ಕೆ ಶ್ರೀ ವೀರಭದ್ರ ದೇವಸ್ಥಾನ ಸಂತೆಕಟ್ಟೆಯಿಂದ ರಜತ ಕಲಶಗಳನ್ನು ಮತ್ತು ಶಿಲಾನ್ಯಾಸದ ಶಿಲೆಗಳನ್ನು ಭವ್ಯವಾದ ಮೆರವಣಿಗೆಯಲ್ಲಿ ಶ್ರೀ ದೇವಳಕ್ಕೆ ತರುವುದರೊ೦ದಿಗೆ ಸಂಜೆ 6.00ರಿ೦ದ 7.00 ಕ್ಕೆ : ನೂತನ ಗರ್ಭಗುಡಿಯ ಪಂಚಾಂಗದ ಸುತ್ತಲೂ ಸಾಲು ಹಣತೆ ದ್ವೀಪ ಪ್ರಜ್ವಲನೆ ಹಾಗೂ ಭಜನ ಕಾರ್ಯಕ್ರಮವು ಜರಗಲಿದೆ.

7.00ಕ್ಕೆ: ಶ್ರೀ ದೇವರ ರಾತ್ರಿ ಪೂಜೆ ಮತ್ತು ಪ್ರಸಾದ ವಿತರಣೆಯ ಬಳಿಕ 7.30 ಕ್ಕೆ : ಭೋಜನ ಪ್ರಸಾದ ಕಾರ್ಯಕ್ರಮ ಜರಗಲಿದೆ.

ಮಾರ್ಚ್ 25ರ ಸೋಮವಾರದ೦ದು ಬೆಳಿಗ್ಗೆ 7.೧೦ಕ್ಕೆ ಸಕಲ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ಶ್ರೀಸ೦ಸ್ಥಾನ ಶ್ರೀಕಾಶೀಮಠದ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಿಧಿ ಕಲಶ ಸ್ಥಾಪನಾ ಪೂರ್ವಕ ಶಿಲಾನ್ಯಾಸ ಕಾರ್ಯಕ್ರಮವು ಜರಗಲಿದೆ.

No Comments

Leave A Comment