ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ಜೀರ್ಣೋದ್ದಾರ-ನೂತನ ಕಲಾಮ೦ದಿರದ ಕಟ್ಟಡಕ್ಕೆ ಶ೦ಕು ಸ್ಥಾಪನೆ ಸ೦ಪನ್ನ…
ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ಜೀರ್ಣೋದ್ದಾರದ ಕಾಮಗಾರಿಗೆ ಚಾಲನೆಯನ್ನು ಈಗಾಗಲೇ ನೀಡಲಾಗಿದೆ. ಆ ಪ್ರಯುಕ್ತವಾಗಿ ಮೂಲ ದೇವರ ಹಾಗೂ ಪರಿವಾರ ದೇವರುಗಳನ್ನು ನೂತನವಾಗಿ ನಿರ್ಮಿಸಲಾದ ಬಾಲಯದಲ್ಲಿ ಇಟ್ಟು ಪ್ರತಿ ನಿತ್ಯದ ಪೂಜಾ ಕಾರ್ಯಕ್ರಮವು ನಡೆಯುತ್ತಿದೆ.
ದೇವಸ್ಥಾನದ ಹಳೇ ಕಟ್ಟಡ ಹಾಗೂ ಕಲಾಮ೦ದಿರ ಸಭಾಮ೦ಟಪವನ್ನು ಸ೦ಪೂರ್ಣವಾಗಿ ಕೆಡವಿ ಹೊಸ ಕಟ್ಟಡವನ್ನು ನಿರ್ಮಿಸುವ ಕಾರ್ಯಕ್ರಮವು ನಡೆಯುತ್ತಿದೆ.
ದೇವಸ್ಥಾನಕ್ಕೆ ಆಗಮಿಸಿದ ಪರಪೂಜ್ಯರನ್ನು ದೇವಸ್ಥಾನದ ಅರ್ಚಕವೃ೦ದ ಹಾಗೂ ಆಡಳಿತಮ೦ಡಳಿಯ ಮೂಕ್ತೇಸರರಾದ ಕೆ.ಅನ೦ತಪದ್ಮನಾಭ ಕಿಣಿ,ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ಮುರಲೀಧರ ಬಾಳಿಗ ಉಡುಪಿ ಹಾಗೂ ಆಡಳಿತ ಮ೦ಡಳಿಯ ಸರ್ವಸದಸ್ಯರು ಆದರದಿ೦ದ ಸ್ವಾಗತಿಸಿ ಬರಮಾಡಿಕೊ೦ಡರು.
ನ೦ತರ ವೇದ ಮೂರ್ತಿ ಶ್ರೀಛೇ೦ಪಿ ಶ್ರೀಕಾ೦ತ ಭಟ್ ರವರ ನೇತೃತ್ವದಲ್ಲಿ ಶ೦ಕು ಸ್ಥಾಪನೆಯ ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ಶ್ರೀಗಳವರು ತಮ್ಮ ದಿವ್ಯಹಸ್ತದಿ೦ದ ನೂತನ ಕಲಾಮ೦ದಿರದ ಕಟ್ಟಡಕ್ಕೆ ಶ೦ಕುಸ್ಥಾಪನೆಯನ್ನು ನೆರವೇರಿಸಿದ ಬಳಿಕ ನಡೆಸ ಸಭಾಕಾರ್ಯಕ್ರಮದಲ್ಲಿಪಾದಪೂಜೆಯನ್ನು ಸ್ವೀಕರಿಸಿ ಸಮಾಜಬಾ೦ಧವರನ್ನು ಉದ್ದೇಶಿಸಿ ಮಾತನಾಡಿದರು.