ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಹೆಲಿಕಾಪ್ಟರ್ ಪತನ: ನೈಜೀರಿಯಾದ ಪ್ರತಿಷ್ಠಿತ ಬ್ಯಾಂಕ್‌ ನ ಸಿಇಒ ಸೇರಿ 6 ಮಂದಿ ಸಾವು

ಕ್ಯಾಲಿಫೋರ್ನಿಯಾ: ಫೆ11 . ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಪತನಗೊಂಡು ಆಕ್ಸಿಸ್ ಬ್ಯಾಂಕ್ ಗ್ರೂಪ್ ನ ಸಿಇಓ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ದಕ್ಷಿಣ ಕ್ಯಾಲಿಫೋರ್ನಿಯಾದ ಮೊಹಾವಿ ಮರುಭೂಮಿಯಲ್ಲಿ ಫೆ 9 ರಂದು ರಾತ್ರಿ 10ಕ್ಕೆ ಹೆಲಿಕಾಪ್ಟರ್ ಪತನಗೊಂಡಿದ್ದು, ಈ ವೇಳೆ ಅದರಲ್ಲಿ ಬ್ಯಾಂಕ್ ಸಿಇಓ ಸೇರಿದಂತೆ ಆರು ಮಂದಿ ಇದ್ದರು ಎಂದು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ ವಿಶ್ವ ವ್ಯಾಪಾರ ಸಂಸ್ಥೆಯ ಮಹಾನಿರ್ದೇಶಕ ಎನ್ಗೊಜಿ ಒಕೊಂಜೊ-ಇವಾಲಾ ಅವರು, ಈ ಅಪಘಾತದಲ್ಲಿ ಆಕ್ಸಿಸ್ ಬ್ಯಾಂಕ್ ಗ್ರೂಪ್ ನ ಸಿಇಒ ಹರ್ಬರ್ಟ್ ವಿಗ್ವೆ, ಅವರ ಪತ್ನಿ, ಮಗ ಮೃತಪಟ್ಟಿದ್ದಾರೆ. ಅವರ ಸಾವಿನ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ಏನೆಂಬುದು ಇನಷ್ಟೇ ತಿಳಿದು ಬರಬೇಕಿದೆ.

No Comments

Leave A Comment