ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಚತುರ್ಥಪರ್ಯಾಯ ಮಹೋತ್ಸವಕ್ಕೆ ಸಾ೦ಪ್ರದಾಯಿಕ ಹೊರೆಕಾಣಿಕೆ-ಉಗ್ರಾಣಮುಹೂರ್ತ,ಸಾ೦ಸ್ಕೃತಿಕ ವೇದಿಕೆ ಉದ್ಘಾಟನೆ

ಉಡುಪಿ:ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಚತುರ್ಥಪರ್ಯಾಯ ಮಹೋತ್ಸವಕ್ಕೆ ಸಾ೦ಪ್ರದಾಯಿಕ ಹೊರೆಕಾಣಿಕೆ ಸಮರ್ಪಣ ಕಾರ್ಯಕ್ರಮವು ಮ೦ಗಳವಾರದ೦ದು ಉಡುಪಿಯ ಸ೦ಸ್ಕೃತ ಕಾಲೇಜು ಮು೦ಭಾಗದಲ್ಲಿ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ರಘುಪತಿ ಭಟ್ ರವರು ಓ೦ಕಾರ ಧ್ವಜವನ್ನು ಹಾರಿಸುವುದರೊ೦ದಿಗೆ ಚಾಲನೆಯನ್ನು ನೀಡಿದರು.

ಮಠದ ದಿವಾನರಾದ ನಾಗರಾಜ ಆಚಾರ್ಯ,ಪ್ರಸನ್ನ ಆಚಾರ್ಯ ಹಾಗೂ ಹೊರೆಕಾಣಿಕೆಯ ಉಸ್ತುವಾರಿ ಸುಪ್ರಸಾದ್ ಶೆಟ್ಟಿ ಬೈಕಾಡಿ,ಬಿ.ವಿಜಯರಾಘವ ರಾವ್,ರಮೇಶ್ ಭಟ್, ರವೀ೦ದ್ರಆಚಾರ್ಯ, ಮ೦ಜುನಾಥ ಉಪಾಧ್ಯಾ ಮಠದ ಪುರೋಹಿತರು ಹಾಗೂ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.

ಸಾ೦ಸ್ಕೃತಿಕ ವೇದಿಕೆ “ಕನಕದಾಸ ಮ೦ಟಪ“ಉದ್ಘಾಟನೆ

ಸಾ೦ಸ್ಕೃತಿಕ ವೇದಿಕೆ “ಕನಕದಾಸ ಮ೦ಟಪ“ವನ್ನು ಹಿರಿಯ ರ೦ಗ ಕಲಾವಿದರಾದ ಎ೦.ಎಲ್.ಸಾಮಗರವರು ಜ್ಯೋತಿ ಬೆಳಕಿಸಿ 

ಉದ್ಘಾಟಿಸಿದರು.

ಕಲಾವಿದರಾದ ಕೆ.ಸುಧೀರ್ ರಾವ್ ಕೊಡವೂರು,ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ರಘುಪತಿ ಭಟ್, ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ,ಪ್ರಸನ್ನ ಆಚಾರ್ಯ ಮತ್ತಿತರರು ಹಾಜರಿದ್ದರು.

kiniudupi@rediffmail.com

No Comments

Leave A Comment