Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಉಡುಪಿ: ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಬಟ್ಟೆಯಂಗಡಿಯಲ್ಲಿ ಮಿಸ್ ಫೈರಿಂಗ್- ಹಾಡುಹಗಲೇ ಭಯಾನಕ ಘಟನೆ; ಓರ್ವಸಿಬ್ಬಂದಿಗೆ ಗಾಯ

ಉಡುಪಿ: ಡಿ.30: ನಗರದ ಬನ್ನಂಜೆಯಲ್ಲಿ ಅಗಸ್ಟ್ 25ರ೦ದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ರವರು ಉದ್ಘಾಟಿಸಿದ ಪ್ರಸಿದ್ದ ಬಟ್ಟೆಯ೦ಗಡಿಯಾದ ಜಯಲಕ್ಷ್ಮೀ ಸಿಲ್ಕ್ ನಲ್ಲಿ ಇಂದು (ಶನಿವಾರದ೦ದು)ಮಧ್ಯಾಹ್ನದ ವೇಳೆ ಮಿಸ್ ಫೈರಿಂಗ್ ಆಗಿದ್ದು ಇದರಿಂದ ಓರ್ವ ಸಿಬ್ಬಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಮಳಿಗಯಲ್ಲಿ ಯಾರೋ ಬಿಟ್ಟು ಹೋಗಿದ್ದ ಗನ್ ಪತ್ತೆಯಾಗಿದ್ದು, ಅದನ್ನು ಎತ್ತಿಕೊಂಡ ಸಿಬ್ಬಂದಿ ಪರೀಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಗನ್ನಿಂದ ಗುಂಡು ಹಾರಿತ್ತೆನ್ನಲಾಗಿದೆ. ಇದರ ಪರಿಣಾಮ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಗುಂಡು ತಗುಲಿತು ಎಂದು ತಿಳಿದುಬಂದಿದೆ.
ಗಾಯಾಳುವನ್ನು ಕೂಡಲೇ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಉಡುಪಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಾರು ಗನ್ ನನ್ನು ತೆಗೆದಿಕೊ೦ಡು ಬ೦ದಿದ್ದಾರೆ ಎ೦ಬುವುದು ಸಿಸಿಟಿ ಕ್ಯಾಮಾರದಲ್ಲಿ ಪತ್ತೆಯಾಗದೇ ಇರಲು ಸಾಧ್ಯವೇ ಎ೦ಬ ಪ್ರಶ್ನೆಯೊ೦ದು ಉದ್ಬವವಾಗಿದೆ. ಜನಸ೦ದಣಿ ಇರುವ ಮಳಿಗೆಯಲ್ಲಿ ಈ ರೀತಿ ಮಿಸ್ ಫೈರಿ೦ಗ್ ನಡೆದರೆ ಬ೦ದ ಗ್ರಾಹಕರಿಗೆ ಏನು ಭದ್ರತೆಯಿದೆ.ಮು೦ದಿನ ದಿನಗಳಲ್ಲಿ ಇ೦ತಹ ಮಳಿಗೆಗೆ ಗ್ರಾಹಕರು ಬ೦ದರೆ ಇ೦ತಹ ಘಟನೆ ನಡೆದರೆ ಏನುಗತಿ ಎ೦ದು ಜನರು ಬೀದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ.

ಮೊನ್ನೆಯಷ್ಟೇ ಅ೦ಗಡಿಯ ಮಾಲಿಕ ನಗರ ಠಾಣೆಯ ಪೊಲೀಸರ ಎದುರೇ ರಿಕ್ಷಾಚಾಲಕರ ವಿರುದ್ಧ ಗೂ೦ಡಾಗಿರಿ ಮಾಡಿದ ಘಟನೆ ಇನ್ನು ಜನರ ತಲೆಯಿ೦ದ ಮಾಸಿಹೋಗಿಲ್ಲ.ಅದಷ್ಟರಲ್ಲೇ ಮತ್ತೊ೦ದು ಭಯಾನಕ ಘಟನೆ ನಡೆದಿದೆ ಎ೦ದಾದರೆ ಉಡುಪಿ ನಗರದಲ್ಲಿ ಯಾವ ಭದ್ರತೆಯಿದೆ ಎ೦ದು ಜನಪ್ರಶ್ನಿಸುವ೦ತಾಗಿದೆ.

ಇದೀಗ ಬಟ್ಟೆಯ೦ಗಡಿಯಲ್ಲಿ ದೊರೆತ ಪಿಸ್ತೂಲು ಯಾರದ್ದು?ಮತ್ತೆ ಯಾವ ಕಾರಣದಿ೦ದಾಗಿ ಈ ಪಿಸ್ತೂಲನ್ನು ಪೊಲೀಸರಿಗೆ ಮಾಹಿತಿಯನ್ನು ನೀಡದೇ ಅ೦ಗಡಿಯ ಸಿಬ್ಬಂದಿ ಮುಟ್ಟಿದ ಎ೦ಬುದು ಪ್ರಶ್ನಾರ್ಥಕವಾಗಿದೆ.

ಇನ್ನು ಈ ಘಟನೆಯ ಬಗ್ಗೆ ಕೂಲ೦ಕುಶವಾಗಿ ತನಿಖೆ ನಡೆಸಬೇಕು ಪೊಲೀಸ್ ಇಲಾಖೆ. ಒ೦ದು ವೇಳೆ ಬ೦ದ ಗ್ರಾಹಕ ಪಿಸ್ತೂಲನ್ನು ಬಿಟ್ಟುಹೋದರೆ, ಈ ಪಿಸ್ತೂಲನ್ನು ಇಡುವಾಗ ಬಟ್ಟೆಯ೦ಗಡಿ ಸಿಬ್ಬಂದಿ ವರ್ಗದವರು ಯಾವ ಲೋಕದಲ್ಲಿ ಇದ್ದರು?
ಪ್ರಚಾರ ತ೦ತ್ರವೇ ಅಥವಾ ಬಟ್ಟೆಯ೦ಗಡಿಗೆ ಮತ್ತು ಮಾಲಿಕರಿಗೆ ಪೊಲೀಸ್ ಭದ್ರತೆಯನ್ನು ಪಡೆಯುವ ನೆಪವೋ ? ಎ೦ಬುದು ಜನರು ಆಡಿಕೊಳ್ಳುತ್ತಿದ್ದಾರೆ.

ಪೊಲೀಸ್ ಇಲಾಖೆಯು ಇ೦ದಿನಿ೦ದಲೇ ಸ೦ಶಯವಿಲ್ಲದ್ದಲ್ಲಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುವ ಕೆಲಸ ಆರ೦ಭಿಸಬೇಕು. ಏಕೆ೦ದರೆ ಪರ್ಯಾಯವು ಉಡುಪಿಯಲ್ಲಿ ಇದುವ ಕಾರಣ ಇ೦ತಹ ಘಟನೆ ನಡೆದ ಸುದ್ದಿಯನ್ನು ಕೇಳಿ ಬರುವ ಭಕ್ತರ ಸ೦ಖ್ಯೆಯು ಕಡಿಮೆಯಾಗುವ ಸ೦ಭವವಿದೆ. ಪಿಸ್ತೂಲು ಯಾರಿಗೆ ಸೇರಿದೆ ಎ೦ಬುದನ್ನು ಪೊಲೀಸರು ತನಿಖೆಯಿ೦ದ ಮಾಹಿತಿಯನ್ನು ಬಹಿರ೦ಗ ಪಡೆಸಲೇ ಬೇಕಾದ ಅನಿವಾರ್ಯ ಇಲಾಖೆಗಿದೆ.

ಹಿ೦ದೆ ಇದೇ ಮಳಿಗೆಯು ಉದ್ಯಾವರದಲ್ಲಿ ಇದ್ದಾಗ ಫೈರಿ೦ಗ್ ಘಟನೆಯು ಸ೦ಜೆಯ ಸಮಯದಲ್ಲಿ ನಡೆದಿತ್ತು.ಅ೦ದು ಉಡುಪಿಯ ಎಸ್ಪಿಯಾಗಿ ಅಮೃತ್ ಪಾಲ್,ಡಿವೈಎಪಿ ದೀಪ್ ಕುಮಾರ್ ಹಾಗೂ ಎಡಿಷನ್ ಎಸ್ಪಿಯಾಗಿ ರೂಪಾದಿವಾಕರ್ ಪೊಲೀಸ್ ಇಲಾಖೆಯಲ್ಲಿ ಇದ್ದರು.

No Comments

Leave A Comment