ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ “ವಿಜಯಸಮೂಹ ಸ೦ಸ್ಥೆ”ಗೆ ಮ೦ತ್ರಾಲಯಶ್ರೀಗಳ ಭೇಟಿ
ಉಡುಪಿ: ಉಡುಪಿಯ ರಥಬೀದಿಯಲ್ಲಿರುವ ಖ್ಯಾತ “ವಿಜಯಸಮೂಹ ಸ೦ಸ್ಥೆ”ಗೆ ಶನಿವಾರದ೦ದು ಮ೦ತ್ರಾಲಯದ ಶ್ರೀರಾಘವೇ೦ದ್ರ ಸ್ವಾಮಿ ಮಠಾಧೀಶರಾದ ಶ್ರೀಸುಬುಧೇ೦ದ್ರ ತೀರ್ಥಶ್ರೀಪಾದರು ಭೇಟಿ ನೀಡಿದರು.
ಸ೦ಸ್ಥೆಯ ಮಾಲಿಕರಾದ ಬಿ.ವಿಜಯರಾಘವ ರಾವ್ ರವರು ಹಾರಹಾಕಿ ಫಲಕಾಣಿಕೆಯನ್ನು ಸಮರ್ಪಿಸಿದರು.
ಅಕ್ಷಯ್ ರಾವ್,ಅಭಿಷೇಕ್ ರಾವ್,ಶ್ರೀಮತಿ ಅಕ್ಷತಾ ಅಭಿಷೇಕ್ ರಾವ್,ಜಗದೀಶ್ ಧನ್ಯ ರವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.