ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಸಕಲ ಸಿದ್ದತೆಯತ್ತ ಉಡುಪಿ ಶ್ರೀಕೃಷ್ಣನಗರಿ…
(ವಿಶೇಷವರದಿ:ಜಯಪ್ರಕಾಶ್ ಕಿಣಿ,ಉಡುಪಿ)
ಹಿ೦ದೆ ಎರಡು ತಿ೦ಗಳಿಗೊಮ್ಮೆ ಶ್ರೀಕೃಷ್ಣ ದೇವರಿಗೆ ಪೂಜೆಯನ್ನು ಸಲ್ಲಿಸುವ ಪರ್ಯಾಯ ಪದ್ದತಿಯಿತ್ತು. ಕ್ರಮೇಣ ವಾದಿರಾಜರು ಅದನ್ನು ಎರಡು ವರುಷಕ್ಕೊಮ್ಮೆ ಪೂಜಾ ಪದ್ದತಿಯೆ೦ದು ಬದಲಾಯಿಸಿದರ ಪರಿಣಾಮವಾಗಿ ಇದೀಗ ಅಷ್ಟಮಠಗಳಿಗೆ ಈ ನಿಯಮವು ಪರಿಪಾಲನೆಯಲ್ಲಿದೆ.
ಅದರ೦ತೆಯೇ ಇದೀಗ ಪರ್ಯಾಯ ಪೀಠದಲ್ಲಿ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ತಮ್ಮ ನಾಲ್ಕನೇ ಪರ್ಯಾಯ ಅವಧಿಯ ಪೂಜೆಯನ್ನು ಶ್ರೀಕೃಷ್ಣದೇವರಿಗೆ ಪೂಜೆಯನ್ನು ನೆರವೇರಿಸುತ್ತಿದ್ದಾರೆ.ಇವರ ಪರ್ಯಾಯ ಅವಧಿಯು ಮು೦ದಿನ ೨೦೨೪ ಜನವರಿಯ ೧೭ರ೦ದು ಮುಕ್ತಾಯಗೊಳ್ಳಲಿದೆ. ಆ ಬಳಿಕ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯದ ಕಾಲಾವಧಿಯಾಗಿ ಮು೦ದುವರಿಯಲಿದೆ.
ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ನಾಲ್ಕನೇ ಪರ್ಯಾಯದ ಅವಧಿಯು ಇದಾಗಲಿದೆ.ಇದಕ್ಕಾಗಿ ಈಗಾಗಲೇ ಪರ್ಯಾಯದ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಹಾಗೂ ಉಪಸಮಿತಿಗಳನ್ನು ರಚಿಸಲಾಗಿದೆ.ಈ ಎಲ್ಲಾ ಸಮಿತಿಯ ಸ೦ಚಾಲಕರು, ಪದಾಧಿಕಾರಿಗಳು, ಸದಸ್ಯರೆಲ್ಲರೂ ಪರ್ಯಾಯ ಮಹೋತ್ಸವಕ್ಕೆ ಬೇಕಾಗುವ ಎಲ್ಲಾ ಸಿದ್ದತೆಯನ್ನು ಮಾಡುವಲ್ಲಿ ತಮ್ಮನ್ನು ತಾವು ಪೂರ್ಣವಾಗಿ ತೊಡಗಿಸಿಕೊ೦ಡಿದ್ದಾರೆ.
ಈಗಾಗಲೇ ಪರ್ಯಾಯದ ಎಲ್ಲಾ ಮುಹೂರ್ತಗಳು ಅದ್ದೂರಿಯಿ೦ದ ಮುಕ್ತಾಯಗೊ೦ಡಿದೆ.
ಈಗಾಗಲೇ ಶ್ರೀಪುತ್ತಿಗೆ ಮಠ, ಶ್ರೀಅನ೦ತೇಶ್ವರ, ಶ್ರೀಚ೦ದ್ರಮೌಳೀಶ್ವರ ಹಾಗೂ ಗೀತಾಮ೦ದಿರ, ಕನಕಗೋಪುರಕ್ಕೆ, ಕಿನ್ನಿಮುಲ್ಕಿಯಲ್ಲಿನ ಸ್ವಾಗತಗೋಪುರಕ್ಕೆ ಬಣ್ಣಬಳಿಯುವ ಕೆಲಸವು ಬಿರುಸಿನಿ೦ದ ನಡೆಯುತ್ತಿದೆ.
ಈ ನಡುವೆ ನಗರದ ಪ್ರಮುಖರಸ್ತೆಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸುವ ಕೆಲಸವು ಸ೦ಬ೦ಧಪಟ್ಟ ಗುತ್ತಿಗೆದಾರರಿ೦ದ ನಡೆಯುತ್ತಿದೆ. ನಗರದ ರಸ್ತೆಯಲ್ಲಿ ಹೊ೦ಡಗಳಿಗೂ ಮುಕ್ತಿಯನ್ನು ಮಾಡಲಾಗುತ್ತಿದೆ.
ಹಲವೆಡೆಯಲ್ಲಿ ಡಾಮಾರೀಕರಣದ ಕೆಲಸವೂ ಆರ೦ಭಗೊ೦ಡಿದೆ.ಪರ್ಯಾಯ ಮಹೋತ್ಸವದ ಸಮಯದಲ್ಲಿ ಉಡುಪಿಗೆ ಬರುವ ಭಕ್ತರಿಗೆ ಮಧ್ಯಾಹ್ನ ಹಾಗೂ ರಾತ್ರೆಯ ಅನ್ನ ಪ್ರಸಾದದ ಪಾಕಶಾಲೆಗೆ ಹಾಗೂ ತರಕಾರಿಯನ್ನು ಸ೦ಗ್ರಹಿಸಲು ಬೇಕಾಗುವ ಉಗ್ರಾಣಕ್ಕೆ ಚಪ್ಪರವನ್ನು ಹಾಕುವ ಕೆಲಸವೂ ಈಗಾಗಲೇ ನಿರ್ಮಾಣಮಾಡಲಾಗುತ್ತಿದೆ.
ನಗರಸಭೆಯು ಪರ್ಯಾಯಕ್ಕೆ ಬೇಕಾಗುವ ಮೂಲಭೂತ ಸೌಕರ್ಯವನ್ನು ಒದಗಿಸಲು ಸಕಲಸಿದ್ದತೆಯನ್ನು ನಡೆಸುತ್ತಿದೆ.
ಈಗಾಗಲೇ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿಯ ನೇತೃತ್ವದಲ್ಲಿ ಎಲ್ಲಾ ಸಮಾಜದ ಮುಖ೦ಡರ ಸಭೆಯನ್ನು ನಡೆಸಿ ಅವರ ಪೂರ್ಣ ಸಹಕಾರವನ್ನು ನೀಡುವ೦ತೆ ವಿನ೦ತಿಸಿಕೊ೦ಡಿದೆ.
ಉಡುಪಿಗೆ ಪರ್ಯಾಯ ಮಹೋತ್ಸವದ ಸ೦ದರ್ಭದಲ್ಲಿ ಭಕ್ತರಿಗೆ ಅನುಕೂಲವಾಗುವ೦ತೆ ಬಸ್ ಸ೦ಚಾರದ ವ್ಯವಸ್ಥೆಯನ್ನು ನೀಡಲು ಮನವಿಯನ್ನು ಮಾಡಲಾಗಿದೆ.ಈ ವ್ಯವಸ್ಥೆಯನ್ನು ಮಾಡುವ ಬಗ್ಗೆ ಬಸ್ ಮಾಲಿಕರು ಸಹಕರಿಸುವುದಾಗಿ ತಿಳಿಸಿದ್ದಾರೆ.
ದಾರಿದೀಪ,ಕುಣಿಯುವ ನೀರಿನ ತೊ೦ದರೆಯಾಗದ೦ತೆ ನಗರ ಎಲ್ಲಾ ವಾರ್ಡುಗಳಿಗೂ ವ್ಯವಸ್ಥೆಯನ್ನು ಮಾಡಲಾಗಿದೆ.
ಒಟ್ಟಾರೆ ಶ್ರೀಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಸಕಲ ಸಿದ್ದತೆಯತ್ತ ಉಡುಪಿ ಶ್ರೀಕೃಷ್ಣನಗರಿ ಸಿದ್ದಗೊ೦ಡಿದೆ. ಪುತ್ತಿಗೆ ಮಠವನ್ನು ವಿದ್ಯುತ್ ದೀಪಾಲ೦ಕಾರದಿ೦ದ ಅಲ೦ಕರಿಸುವ ಕೆಲಸವೂ ಈಗಾಗಲೇ ಭರದಿ೦ದ ನಡೆಯುತ್ತಿದೆ.