ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್....ಮುಂದುವರೆದ ನಕ್ಸಲ್ ಕೂಂಬಿಂಗ್: ಶರಣಾಗತಿಗೆ ಸೂಚನೆ, ಪ್ಯಾಕೇಜ್ ನೀಡುತ್ತೇವೆ ಎಂದ ಪರಮೇಶ್ವರ್
ಇದೇ ಮೊದಲ ಬಾರಿಗೆ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂದೂ ಮಹಿಳೆ ಕಣಕ್ಕೆ! ನಾಮಪತ್ರ ಸಲ್ಲಿಕೆ
ಖೈಬರ್ ಪಖ್ತುಂಖ್ವಾ: ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂದೂ ಮಹಿಳೆಯೊಬ್ಬರು ಸ್ಪರ್ಧಿಸಿದ್ದಾರೆ. 16ನೇ ರಾಷ್ಟ್ರೀಯ ಅಸೆಂಬ್ಲಿಗೆ ಸದಸ್ಯರನ್ನು ಆಯ್ಕೆ ಮಾಡಲು ಮುಂದಿನ ವರ್ಷದ ಫೆಬ್ರವರಿ 8 ರಂದು ಪಾಕಿಸ್ತಾನದಲ್ಲಿ ಚುನಾವಣೆ ನಿಗದಿಯಾಗಿದ್ದು, ಖೈಬರ್ ಪಖ್ತುಂಖ್ವಾದ ಬುನರ್ ಜಿಲ್ಲೆಯ ಹಿಂದೂ ಮಹಿಳೆಯೊಬ್ಬರು ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ಸವೀರಾ ಪ್ರಕಾಶ್ ಅವರು ಬುನೇರ್ ಜಿಲ್ಲೆಯ PK-25 ರ ಸಾಮಾನ್ಯ ಸ್ಥಾನಕ್ಕೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಹಿಂದೂ ಸಮುದಾಯದ ಸದಸ್ಯರಾದ ಪ್ರಕಾಶ್ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇತ್ತೀಚಿಗೆ ನಿಧನರಾದ ಅವರ ವೈದ್ಯ ಓಂ ಪ್ರಕಾಶ್ ಕಳೆದ 35 ವರ್ಷಗಳಿಂದ ಪಿಪಿಪಿಯ ಸದಸ್ಯರಾಗಿದ್ದಾರೆ. ಅವರ ನಿರ್ದೇಶನದಂತೆ ಸಮೀರಾ ಪ್ರಕಾಶ್ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಅಬೋಟಾಬಾದ್ ಇಂಟರ್ ನ್ಯಾಷನಲ್ ಮೆಡಿಕಲ್ ಕಾಲೇಜಿನಿಂದ ಪದವೀಧರೆಯಾಗಿರುವ ಪ್ರಕಾಶ್, ಬುನರ್‌ನಲ್ಲಿ ಪಿಪಿಪಿ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಮುದಾಯದ ಕಲ್ಯಾಣಕ್ಕಾಗಿ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿರುವ ಅವರು, ಮಹಿಳೆಯರ ಸುಧಾರಣೆಗಾಗಿ ಕೆಲಸ ಮಾಡುವ, ಸುರಕ್ಷಿತ ವಾತಾವರಣವನ್ನು ಖಾತ್ರಿಪಡಿಸುವ ಮತ್ತು ಅವರ ಹಕ್ಕುಗಳಿಗಾಗಿ ಪ್ರತಿಪಾದಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.