ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಲಿಬಿಯಾದ ಕರಾವಳಿಯಲ್ಲಿ ದೋಣಿ ಮುಳುಗಡೆ- ಕನಿಷ್ಠ 61 ಮಂದಿ ಸಾವು
ಲಿಬಿಯಾ:ಡಿ 17. ಲಿಬಿಯಾದ ಕರಾವಳಿಯಲ್ಲಿ ದೋಣಿ ಮುಳುಗಿ ಕನಿಷ್ಠ 61 ಮಂದಿ ವಲಸಿಗರು ನಾಪತ್ತೆಯಾಗಿದ್ದಾರೆ ಹಾಗೂ ಸಾವನ್ನಪ್ಪಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಮಾಹಿತಿ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಲಿಬಿಯಾದ ವಾಯುವ್ಯ ಕರಾವಳಿಯಲ್ಲಿರುವ ಜುವಾರಾದಿಂದ ಹೊರಟ ದೋಣಿ ಅಲೆಗಳ ಹೊಡೆತದಿಂದಾಗಿ ಮುಳುಗಿರಬಹುದು. ನೈಜೀರಿಯಾ, ಗ್ಯಾಂಬಿಯಾ ಹಾಗೂ ಇತರ ಆಫ್ರಿಕನ್ ದೇಶಗಳಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 86 ವಲಸಿಗರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದು, ಈ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ.
ಘಟನೆಯಲ್ಲಿ ದೋಣಿಯಲ್ಲಿದ್ದ 25 ಮಂದಿಯನ್ನು ರಕ್ಷಿಸಲಾಗಿದೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಲಿಬಿಯಾ ಹಾಗೂ ಟುನೀಶಿಯಾ ಇಟಲಿಯ ಮೂಲಕ ಯುರೋಪ್ ತಲುಪುವ ಭರವಸೆಯಲ್ಲಿ ಅಪಾಯಕಾರಿ ಸಮುದ್ರ ಪ್ರಯಾಣವನ್ನು ಬೆಳೆಸಿದ ದೋಣಿ ಇದೀಗ ದುರಂತ ಅಂತ್ಯ ಕಂಡಿದೆ.