
ಶಿರಸಿ: ಆಟವಾಡುತ್ತಾ ನದಿಗೆ ಬಿದ್ದ ಮಗುವಿನ ರಕ್ಷಣೆಗಾಗಿ ಧುಮುಕಿದ ಒಂದೇ ಕುಟುಂಬದ ಐವರು ಸಾವು
ಶಿರಸಿ: ಪ್ರವಾಸಕ್ಕೆಂದು ನದಿ ತೀರಕ್ಕೆ ತೆರಳಿದ್ದ ಒಂದೇ ಕುಟುಂಬದ ಐವರು ನದಿಯಲ್ಲಿ ಮುಳುಗಿ ಸಾವು ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಶಾಲ್ಮಲಾ ನದಿಯ ಭೀಮನಗುಂಡಿಯಲ್ಲಿ ಭಾನುವಾರ ನಡೆದಿದೆ.
ಮೃತರು ಶಿರಸಿಯ ರಾಮನಬೈಲ್ ಹಾಗೂ ಕಸ್ತೂರಬಾ ನಗರ ನಿವಾಸಿಗಳಾಗಿದ್ದು ರಾಮನಬೈಲಿನ ನಿವಾಸಿಗಳಾದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ನಾದಿಯಾ ನೂರ್ ಅಹಮದ್ ಶೇಖ್ (20), ನಬಿಲ್ ನೂರ್ ಅಹಮದ್ ಶೇಖ್(22), ವಿದ್ಯಾರ್ಥಿ ಉಮರ್ ಸಿದ್ದಿಕ್ (14) ಹಾಗೂ ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಬಾ ತಬಸುಮ್ (21) ಸಾವಿಗೀಡಾದವರಾಗಿದ್ದಾರೆ.