ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ;ಡಿ.17ರ೦ದು 95ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವಕ್ಕೆ ಚಾಲನೆ…
ಉಡುಪಿ:ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 95ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಹೋತ್ಸವವು ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ ದಿನಾಂಕ 17-12-2023 ನೇ ಆದಿತ್ಯವಾರ ಪ್ರಾತಃಕಾಲ 8:00 ಘಂಟೆಗೆ ಆರಂಭಗೊಂಡು ಮಾರ್ಗಶಿರ ಶುದ್ಧ ದ್ವಾದಶಿ 24-12-2023 ನೇ ಆದಿತ್ಯವಾರ ಪ್ರಾತಃಕಾಲ 8:00 ಘಂಟೆಯ ತನಕ ಅಹೋರಾತ್ರಿ 7 ದಿನಗಳ ಪರ್ಯಂತ ಜರಗಲಿರುವುದು.
ದಿನಾಂಕ 17-12-2023 ರಂದು ಬೆಳಗ್ಗೆ 8:00 ಘಂಟೆಗೆ ದೀಪ ಪ್ರಜ್ವಲನ ನಡೆಯಲಿದೆ ತದನಂತರ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಗಳ ವಿವರ : 1) ಭಜನಾ ಸಪ್ತಾಹ ದೀಪ ಪ್ರಜ್ವಲನೆ – ಪ್ರಥಮ ದಿನ 2) ಆಹ್ವಾನಿತ ಭಜನಾ ಕಲಾವಿದರಿ೦ದ ಭಕ್ತಿ ಸಂಗೀತ ಕಾರ್ಯಕ್ರಮ – ಪ್ರತಿನಿತ್ಯ ಸಾಯಂಕಾಲ 6:00 ಕ್ಕೆ 3) ವಸಂತ ಪೂಜೆ – ಪ್ರತಿನಿತ್ಯ ರಾತ್ರಿ 10:30 ಕ್ಕೆ 4) ಕಾಕಡ ಆರತಿ – ಪ್ರತಿನಿತ್ಯ ಪ್ರಾತಕಾಲ 4.30 ಕ್ಕೆ 5) ವಿವಿಧ ಸಂತ ಮಂಡಳಿಯವರ ಭಜನೆ 6) ಏಕಾದಶೀ ನಗರ ಭಜನೆ 7) ಮುಕೋಟಿ ದ್ವಾದಶಿ -ಸ್ವವರ್ಣನದಿ ಸ್ನಾನ, ಸಪ್ತಾಹ ಮಂಗಳ, ಉರುಳುಸೇವೆ, ಏಲಂ ಕಾರ್ಯಕ್ರಮ
ಈ ಎಲ್ಲಾ ಪುಣ್ಯಪ್ರದ ಕಾರ್ಯಕ್ರಮದಲ್ಲಿ ಸಮಸ್ತ ಸಮಾಜ ಬಾಂಧವರು ಹಾಗೂ ಭಜಕ ವೃಂದದವರು ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸಪ್ತಾಹ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.