Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಉಡುಪಿ: ರಂಗಕರ್ಮಿ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ

ಕಾಪು:ಡಿ13, ರಂಗಕರ್ಮಿ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ (68) ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ (59) ಆತ್ಮಹತ್ಯೆ ಶರಣಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಸರಳ ಸಜ್ಜನ ವ್ಯಕ್ತಿತ್ವದ ಲೀಲಾಧರ ಶೆಟ್ಟಿ ಒಮ್ಮೆ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.‌ ಅತ್ಯುತ್ತಮ ನಾಟಕ ತಂಡ ಹೊಂದಿದ್ದರು. ಬಂಟರ ಸಂಘದಲ್ಲೂ ಸಕ್ರಿಯರಾಗಿದ್ದರು.

ಲೀಲಾಧರ ಶೆಟ್ಟಿಯವರು ಜಿಲ್ಲಾ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಅತ್ಯಂತ ಸಮಾಜಮುಖಿ ಕಾರ್ಯ ನಿರ್ವಹಿಸಿದ ಸಮಾಜಸೇವಕರೂ ಆಗಿದ್ದರು. ವಿಶೇಷವಾಗಿ ರಂಗಕರ್ಮಿಯು ಆಗಿ ಕಳೆದ ಹಲವಾರು ವರ್ಷಗಳಿಂದ “ರಂಗಿತರಂಗ” ನಾಟಕ ತಂಡವನ್ನು ಮುನ್ನಡೆಸಿ ನಾಟಕ ನಿರ್ದೇಶನ, ನಟರಾಗಿ ಕೂಡಾ ಜನಾನುರಾಯಿಯಾಗಿದ್ದರು.

ಮುಂದಿನ ವಾರ ನಡೆಯಬೇಕಾಗಿದ್ದ ಕಬ್ಬಡಿ ಪಂದ್ಯಾಟಕ್ಕೆ ಬೇಕಾದ ಊಟ ಉಪಹಾರ ಶಾಮಿಯಾನ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಲೀಲಾಧರ ಶೆಟ್ಟಿ ಅವರೇ ತಯಾರಿ ಮಾಡಿಟ್ಟಿದ್ದರು. ಇವರ ಅಂತಿಮ ದರ್ಶನ ಇಂದು ಸಂಜೆ ನಾಲ್ಕು ಗಂಟೆಗೆ ಕಾಪು ಮಜೂರು ಕರಂದಾಡಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

No Comments

Leave A Comment