ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಭಾರತದಲ್ಲಿ ದುಷ್ಕೃತ್ಯಕ್ಕೆ ಉಗ್ರರ ಸಂಚು ಪ್ರಕರಣ; ಬೆಂಗಳೂರಿನ 6 ಕಡೆ ಎನ್ಐಎ ದಾಳಿ

ಬೆಂಗಳೂರು: ದೇಶದಲ್ಲಿ ದುಷ್ಕೃತ್ಯ ನಡೆಸಲು ಉಗ್ರರು ಸಂಚು ನಡೆಸಿರುವ ಹಿನ್ನೆಲೆ ಎನ್ಐಎ ತನ್ನ ದಾಳಿಯನ್ನು ಮುಂದುವರೆಸಿದ್ದು, ಇಂದು ಬೆಳಗಿನ ಜಾವ ಬೆಂಗಳೂರಿನ ಒಟ್ಟು 6 ಕಡೆಗಳಲ್ಲಿ ದಾಳಿ ನಡೆಸಿ, ತೀವ್ರ ಪರಿಶೀಲನೆ ನಡೆಯುತ್ತಿದೆ.

ಶಂಕಿತ ತಉಗ್ರ ನಸೀರ್ ನೀಡಿರುವ ಮಾಹಿತಿ ಮೇರೆಗೆ ಎನ್ಐಎ ಈ ದಾಳಿಯನ್ನು ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಈ ಹಿಂದೆ ಹೆಬ್ಬಾಳದಲ್ಲಿ ಗ್ರೇನೇಡ್ ದೊರೆತ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು. ಆರ್‌ಟಿ ನಗರದ ಮನೆಯೊಂದರಲ್ಲಿ ಗ್ರೆನೇಡ್ ಹಾಗು ಪಿಸ್ತೂಲ್ ಸಿಕ್ಕಿತ್ತು. ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿದ್ದು, ತನಿಖಾ ಸಂಸ್ಥೆ ತೀವ್ರವಾಗಿ ತನಿಖೆ ನಡೆಸುತ್ತಿದೆ.

ನಗರದಲ್ಲಿ ಬಂಧನವಾಗಿದ್ದ ಐವರು ಶಂಕಿತ ಉಗ್ರರ ಪ್ರಕರಣಕ್ಕೆ ಸಂಬಂಧಿಸಿ ದಾಳಿಗಳು ನಡೆದಿವೆ. ಮುದಾಸಿರ್, ಜಾಹಿದ್, ತಬ್ರೇಜ್ ಮಹಮದ್ ಉಮರ್ ಸೇರಿ 5 ಜನರನ್ನು ಬಂಧಿಸಲಾಗಿತ್ತು.

ಹೆಬ್ಬಾಳ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ಮೊದಲು ಸಿಸಿಬಿ ಅಧಿಕಾರಿಗಳು ಜುಲೈ 1ರಂದು ದಾಳಿ ಮಾಡಿದ್ದರು. ಈ ವೇಳೆ 7 ನಾಡ ಪಿಸ್ತೂಲ್, 45 ಜೀವಂತ ಗುಂಡು, ಗ್ರೆನೇಡ್ ಹಾಗೂ ವಾಕಿಟಾಕಿಗಳು ಸಿಕ್ಕಿದ್ದವು. ಈ ಪ್ರಕರಣ ಇತ್ತೀಚೆಗಷ್ಟೇ ಎನ್‌ಐಎಗೆ ವರ್ಗಾವಣೆ ಆಗಿತ್ತು.

ವಿಚಾರಣೆಯ ವೇಳೆ ವಿದೇಶದಿಂದ ಜುನೈದ್ ಎಂಬ ಉಗ್ರ ಆಪರೇಟ್ ಮಾಡುತ್ತಾ ಇದ್ದದ್ದು ಬೆಳಕಿಗೆ ಬಂದಿತ್ತು. ಜೊತೆಗೆ ಸರಣಿ ಬಾಂಬ್ ಬ್ಲಾಸ್ಟ್ ರೂವಾರಿ ನಾಸೀರ್ ಜೈಲಿನಲ್ಲಿ ಈ ಶಂಕಿತರಿಗೆ ಭಯೋತ್ಪಾದಕ ಕೃತ್ಯಗಳ ತರಬೇತಿ ನೀಡಿದ್ದ ಎಂಬುದು ತಿಳಿದುಬಂದಿತ್ತು.

ಈ‌ ಸಂಬಂಧ ತನಿಖೆ ನಡೆಸುತ್ತಿರುವ ಎನ್‌ಐಎ ಇಂದು ನಡೆಸಿರುವ ದಾಳಿಯಲ್ಲಿ ಆರು ಕಡೆ ಮನೆಗಳ ಪರಿಶೀಲನೆ ಮಾಡಿದೆ. ದಾಳಿಯಲ್ಲಿ ಮತ್ತಷ್ಟು ವಿಚಾರಗಳು ಬಯಲಾಗುವ ಸಾಧ್ಯತೆಗಳಿವೆ.

kiniudupi@rediffmail.com

No Comments

Leave A Comment