ಭಾರತದಲ್ಲಿ ದುಷ್ಕೃತ್ಯಕ್ಕೆ ಉಗ್ರರ ಸಂಚು ಪ್ರಕರಣ; ಬೆಂಗಳೂರಿನ 6 ಕಡೆ ಎನ್ಐಎ ದಾಳಿ
ಬೆಂಗಳೂರು: ದೇಶದಲ್ಲಿ ದುಷ್ಕೃತ್ಯ ನಡೆಸಲು ಉಗ್ರರು ಸಂಚು ನಡೆಸಿರುವ ಹಿನ್ನೆಲೆ ಎನ್ಐಎ ತನ್ನ ದಾಳಿಯನ್ನು ಮುಂದುವರೆಸಿದ್ದು, ಇಂದು ಬೆಳಗಿನ ಜಾವ ಬೆಂಗಳೂರಿನ ಒಟ್ಟು 6 ಕಡೆಗಳಲ್ಲಿ ದಾಳಿ ನಡೆಸಿ, ತೀವ್ರ ಪರಿಶೀಲನೆ ನಡೆಯುತ್ತಿದೆ.
ಶಂಕಿತ ತಉಗ್ರ ನಸೀರ್ ನೀಡಿರುವ ಮಾಹಿತಿ ಮೇರೆಗೆ ಎನ್ಐಎ ಈ ದಾಳಿಯನ್ನು ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಈ ಹಿಂದೆ ಹೆಬ್ಬಾಳದಲ್ಲಿ ಗ್ರೇನೇಡ್ ದೊರೆತ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು. ಆರ್‌ಟಿ ನಗರದ ಮನೆಯೊಂದರಲ್ಲಿ ಗ್ರೆನೇಡ್ ಹಾಗು ಪಿಸ್ತೂಲ್ ಸಿಕ್ಕಿತ್ತು. ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿದ್ದು, ತನಿಖಾ ಸಂಸ್ಥೆ ತೀವ್ರವಾಗಿ ತನಿಖೆ ನಡೆಸುತ್ತಿದೆ.
ಬಂಧಿತ ಶಂಕಿತ ಉಗ್ರ ಈ ವಿಚಾರದಲ್ಲಿ ಹಲವು ಮಾಹಿತಿ ನೀಡಿದ್ದು, ಆತನಿಂದ ಪಡೆದ ಮಾಹಿತಿಯಂತೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.