Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ನಕಲಿ ಪರಶುರಾಮ ಮೂರ್ತಿಯ ಸೃಷ್ಟಿಕರ್ತ ನಕಲಿ ಹಿಂದುತ್ವವಾದಿ ಸುನಿಲ್ ಕುಮಾರ್ ಗೆ ನಿಷ್ಠಾವಂತ ಎಸ್ ಪಿಯವರನ್ನು ಪ್ರಶ್ನಿಸುವ ಅಧಿಕಾರ ನೀಡಿದವರು ಯಾರು-ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ:ಇಡೀ ಭಾರತ ದೇಶದಲ್ಲಿ ಉಡುಪಿ ಜಿಲ್ಲೆಯ ಜನಸಾಮಾನ್ಯರು ತಲೆತಗ್ಗಿಸುವಂತಹ ಕೆಲಸವನ್ನು ಮಾಡಿದಿದ್ದರೆ ಅದು ಕಾರ್ಕಳದ ಶಾಸಕ ಸುನಿಲ್ ಕುಮಾರ್ ಮಾತ್ರ ನಕಲಿ ಪರಶುರಾಮ ಮೂರ್ತಿಯನ್ನು ಸೃಷ್ಟಿಸಿ ಇಡೀ ದೇಶದ ಜನರಿಗೆ ತುಳು ನಾಡಿನ ಸೃಷ್ಟಿಕರ್ತನಿಗೆ ಮೋಸವನ್ನು ಮಾಡಿದಂತಹ ಹಾಗೂ ಸಿಮೆಂಟ್ ಹಗರಣದಲ್ಲಿ ಭಾಗಿಯಾಗಿ ಸಿಮೆಂಟ್ ಕುಮಾರ ಎಂದು ಬಿರುದಾಂಕಿತ ಸುನಿಲ್ ಕುಮಾರ್ ರವರಿಗೆ ನಮ್ಮ ಉಡುಪಿಯ ಎಸ್ ಪಿ ಅವರನ್ನು ಪ್ರಶ್ನಿಸುವ ಅಧಿಕಾರವನ್ನು ನೀಡಿದವರು ಯಾರು ಕಾ೦ಗ್ರೆಸ್ ಪಕ್ಷದ ಸುರೇಶ್ ಶೆಟ್ಟಿ ಬನ್ನಂಜೆಯವರು ಪ್ರಶ್ನಿಸಿದ್ದಾರೆ.

ತಮ್ಮ ನಕಲಿ ಪರಶುರಾಮ ಮೂರ್ತಿಯ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರು ತನಿಖೆಗೆ ಆದೇಶಿಸಿದ್ದು ತಮ್ಮ ಬಂಧನ ದ ಭೀತಿಯಿಂದ ಉಡುಪಿ ಎಸ್ ಪಿ ಅವರನ್ನು ಪ್ರಶ್ನಿಸಿ ತಾನು ಸಾಚಾ ಎಂಬುದನ್ನು ಬಿಂಬಿಸಲು ಯತ್ನಿಸುತ್ತಿದ್ದಾರೆ ಇದೀಗ ಉಡುಪಿಯಲ್ಲಿ ನಡೆಸುತ್ತಿರುವ ನಡೆಯುತ್ತಿರುವ ಅನೇಕ ನಕಲಿ ದಂಧೆಗಳಿಗೆ ಈ ಬಿಜೆಪಿಯವರ ಕೃಪಾ ಕಟಾಕ್ಷ ಇದ್ದು ಅದನ್ನು ತಡೆಯಲು ಯತ್ನಿಸುತ್ತಿರುವ ಒಬ್ಬ ನಿಷ್ಠಾವಂತ ನಿಷ್ಕಳಂಕ ಉಡುಪಿಯ ಎಸ್ ಪಿ ಡಾಕ್ಟರ್ ಅರುಣ್ ಕುಮಾರ್ ಇವರನ್ನು ಪ್ರಶ್ನಿಸಲು ತಾವು ಯಾರು ಇದೆಲ್ಲ ನಿಮ್ಮ ಬಿಜೆಪಿ ಸರಕಾರದ ಆಡಳಿತದಲ್ಲಿ ನಡೆದಿರಬಹುದು ಇದಕ್ಕೆ ಕಾಂಗ್ರೆಸ್ ಪಕ್ಷವಾಗಲಿ ಕಾಂಗ್ರೆಸ್ ಪಕ್ಷದ ನಾಯಕರಾಗಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಲಿ ಬೆಂಬಲಿಸುವುದಿಲ್ಲ.

ಒಬ್ಬ ನಿಷ್ಠಾವಂತ ಜಿಲ್ಲೆಯ ಪೊಲೀಸ್ ಅಧಿಕಾರಿಯ ಜೊತೆ ಇಡೀ ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದಾರೆಎ೦ಬುದು ನಿಮಗೆ ತಿಳಿದಿರಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

No Comments

Leave A Comment