ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಯುರೋಪಿಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಭಾರತ ಮೂಲದ 13 ವರ್ಷದ ಈಶ್ವರ್ ಶರ್ಮಾ
ಲಂಡನ್: ಯುರೋಪಿಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ ನಲ್ಲಿ ಭಾರತ ಮೂಲದ 13 ವರ್ಷದ ಯೋಗ ಪಟು ಈಶ್ವರ್ ಶರ್ಮಾ ಚಿನ್ನದ ಪದಕ ಗೆದ್ದಿದ್ದಾರೆ.
ಸ್ವೀಡನ್ ನಲ್ಲಿ ಈ ಚಾಂಪಿಯನ್ ಶಿಪ್ ನಡೆದಿದೆ. ಈಗಾಗಲೇ ಹಲವು ಪದಕಗಳನ್ನು ಗೆದ್ದಿರುವ, ಆಗ್ನೇಯ ಇಂಗ್ಲೆಂಡ್ ನ ಯೋಗ ಪಟು ಈಗ ಯುರೋಪಿಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಗ ಮುಡಿಗೇರಿಸಿಕೊಂಡಿದ್ದಾರೆ.
ಕೆಂಟ್‌ನ ಸೆವೆನೋಕ್ಸ್‌ನ ಈಶ್ವರ್ ಶರ್ಮಾ, ತನ್ನ ತಂದೆ ಪ್ರತಿದಿನ ಅಭ್ಯಾಸ ಮಾಡುವುದನ್ನು ನೋಡಿದ ನಂತರ ಮೂರು ವರ್ಷದವರಿದ್ದಾಗ ಯೋಗವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು ಮತ್ತು ಹಲವಾರು ವಿಶ್ವ ಯೋಗ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ.
ಕಳೆದ ವಾರಾಂತ್ಯದಲ್ಲಿ, ಅವರು ಮಾಲ್ಮೊದಲ್ಲಿ ಸ್ವೀಡಿಷ್ ಯೋಗ ಸ್ಪೋರ್ಟ್ಸ್ ಫೆಡರೇಶನ್ ಸಹಯೋಗದೊಂದಿಗೆ ಇಂಟರ್ನ್ಯಾಷನಲ್ ಯೋಗ ಸ್ಪೋರ್ಟ್ಸ್ ಫೆಡರೇಶನ್ ಆಯೋಜಿಸಿದ್ದ ಯುರೋಪಿಯನ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ 12-14 ರ ವಿಭಾಗದಲ್ಲಿ ಯುರೋಪ್ ಕಪ್-2023 ನ್ನು ಪಡೆದ್ದಾರೆ.
“ಈಶ್ವರ್ ಸ್ವಲೀನತೆ (ಆಟಿಸಂ) ಮತ್ತು ಗಮನ ಕೊರತೆ ಹೈಪರ್ ಆಕ್ಟಿವಿಟಿ ಸಮಸ್ಯೆಯನ್ನು ಎದುರಿಸುತ್ತಿದ್ದು, ಇಂತಹ ವಿಶೇಷ ಮಕ್ಕಳಿಗೆ ಯೋಗದ ಸಂದೇಶವನ್ನು ಹರಡಲು ಉತ್ಸುಕನಾಗಿದ್ದಾನೆ” ಎಂದು ಅವರ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.
ಕೊರೋನವೈರಸ್ ಲಾಕ್‌ಡೌನ್ ಸಮಯದಲ್ಲಿ 14 ದೇಶಗಳಲ್ಲಿ 40 ಮಕ್ಕಳಿಗೆ ದೈನಂದಿನ ಯೋಗ ತರಗತಿಗಳನ್ನು ಮುನ್ನಡೆಸಿದ ಶರ್ಮಾ ಅವರನ್ನು ಆಗಿನ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿಯೊಂದಿಗೆ ಗೌರವಿಸಿದರು.
“ಲಾಕ್‌ಡೌನ್ ಸಮಯದಲ್ಲಿ ನೀವು ಜಾಗತಿಕವಾಗಿ ನೂರಾರು ಮಕ್ಕಳಿಗೆ ಯೋಗ ತರಬೇತಿ ನೀಡಿದ್ದೀರಿ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೀವು ಆನಂದಿಸುವ ಚಟುವಟಿಕೆಯನ್ನು ಆನಂದಿಸಲು ಮತ್ತು ಉತ್ತಮ ಸಾಧನೆ ಮಾಡಲು ನೀವು ಸಹಾಯ ಮಾಡಿರುವುದು ಸ್ಪೂರ್ತಿದಾಯಕವಾಗಿದೆ ಎಂದು ಜಾನ್ಸನ್ ಶರ್ಮಾ ಅವರಿಗೆ ಜೂನ್ 2021 ರಲ್ಲಿ ಬರೆದ ವೈಯಕ್ತಿಕ ಪತ್ರದಲ್ಲಿ ತಿಳಿಸಿದ್ದರು.
ಯೋಗಕ್ಕೆ ನೀಡಿದ ಕೊಡುಗೆಗಾಗಿ ಈಶ್ವರ್ 5 ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಮತ್ತು ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಬ್ರಿಟಿಷ್ ನಾಗರಿಕ ಯುವ ಪ್ರಶಸ್ತಿಯನ್ನು ಗೆದ್ದಿದ್ದಾರೆ. ತಂದೆ ಡಾ ವಿಶ್ವನಾಥ್ ಜೊತೆಗೆ, ಈಶ್ವರ್ ಯುಕೆಯಲ್ಲಿ ಯೋಗದ ಬಗ್ಗೆ ಪ್ರಚಾರ ಮಾಡಲು IYoga Solutions ಅನ್ನು ನಡೆಸುತ್ತಿದ್ದಾರೆ.