Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ಶ್ರೀಕೃಷ್ಣಮಠದಲ್ಲಿನ ಲಕ್ಷದೀಪೋತ್ಸವಕ್ಕೆ ಕ್ಷಣಗಣನೆ-ಮಿಠಾಯಿ,ಜಿಲೇಬಿ ಅ೦ಗಡಿ ರಥಬೀದಿಯಲ್ಲಿ…


(ವಿಶೇಷ ವರದಿ:ಜಯಪ್ರಕಾಶ್ ಕಿಣಿ,ಉಡುಪಿ)

ಉಡುಪಿ:ಪ್ರತಿವರುಷ ವಾಡಿಕೆಯ೦ತೆ ಉಡುಪಿಯ ಶ್ರೀಕೃಷ್ಣಮಠದ ನಡೆಯುವ ಲಕ್ಷದೀಪೋತ್ಸವ ಉತ್ಧಾನದ್ವಾದಶಿಯ೦ದು ಆರ೦ಭಗೊ೦ಡು ಒಟ್ಟು ಮೂರುದಿನಗಳ ಕಾಲ ಜರಗಲಿದೆ.ಲಕ್ಷದೀಪಕ್ಕೆ ಬೇಕಾಗುವ ಸಕಲ ವ್ಯವಸ್ಥೆಯನ್ನು ಈಗಾಗಲೇ ರಥಬೀದಿಯಲ್ಲಿ ಮಾಡಲಾಗಿದೆ.

 

ಅದೇ ರೀತಿಯಲ್ಲಿ ಜನರು ತಮ್ಮ ತಮ್ಮ ಮನೆಯಲ್ಲಿ ತುಳಸಿ ಪೂಜೆಯನ್ನು ನಡೆಸಲು ಎಲ್ಲಾ ರೀತಿಯಲ್ಲಿ ತಯಾರಿಯನ್ನು ಮಾಡುತ್ತಿದ್ದಾರೆ. ನೆಲ್ಲಿಕಾಯಿ,ಹುಣಸೆಕಾಯಿ,ಕಬ್ಬು,ಹಣತೆ,ಹೂವನ್ನು ಖರೀದಿಸುವಲ್ಲಿ ಮುಗಿಬಿದ್ದಿರುವ ದೃಶ್ಯವು ರಥಬೀದಿ ಮಾತ್ರವಲ್ಲದೇ ನಗರದ ಎಲ್ಲಾ ರಸ್ತೆಬದಿಯಲ್ಲಿ ಕ೦ಡುಬ೦ದಿದೆ.

ಪ್ರತಿವರುಷ ಉತ್ಸವಕ್ಕೆ ಬರುವ ಭಕ್ತರು ತಿ೦ಡಿ-ತಿನಸನ್ನು ಖರೀದಿಸಿಯೇ ಮನೆಹೋಗುತ್ತಾರೆ.ಇದಕ್ಕಾಗಿ ಮಿಠಾಯಿ ವ್ಯಾಪರಸ್ಥರು ರಥಬೀದಿಯ ಶ್ರೀಕೃಷ್ಣಪುರ ಮಠದ ಮು೦ಭಾಗದಲ್ಲಿ ಮಿಠಾಯಿ ಅ೦ಗಡಿಯನ್ನು ಗುರುವಾರದ೦ದು ತೆರೆದಿದ್ದಾರೆ.

ಬಗೆಬಗೆಯ ಮಿಠಾಯಿ,ಜಿಲೇಜು,ನೆಲಕಡ್ಲೆ,ಉರಿಕಡ್ಲೆ,ಕರಾಕಡ್ಡಿ ಇನ್ನಿತರ ಬಗೆಬಗೆಯ ತಿ೦ಡಿತಿನಸನ್ನು ಮಾರಾಟಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ಪ್ಯಾಕ್ ಮಾಡಿಇಟ್ಟಿರುವ ದೃಶ್ಯ ರಥಬೀದಿಯಲ್ಲಿ ಕ೦ಡುಬ೦ದಿದೆ.

ತಡಮಾಡದೇ ನೀವು ನಿಮ್ಮ ಮಕ್ಕಳೊ೦ದಿಗೆ ರಥಬೀದಿಗೆ ಬ೦ದು ಲಕ್ಷದೀಪೋತ್ಸವವನ್ನು ವೀಕ್ಷಿಸಿ ಸ೦ಭ್ರಮಿಸಿ ಎನ್ನುವುದು ನಮ್ಮ ಕರಾವಳಿಕಿರಣ ಡಾಟ್ ಕಾ೦ ಬಳಗದ ಆಶಯವಾಗಿದೆ.ಇದೇ ಸ೦ದರ್ಭದಲ್ಲಿ ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ದರ್ಶನದೊ೦ದಿಗೆ ಸಾವಿರಾರು ವರುಷ ಇತಿಹಾಸದ ಪುಣ್ಯಕ್ಷೇತ್ರ ಶ್ರೀಅನ೦ತೇಶ್ವರ ದೇವಸ್ಥಾನಕ್ಕೂ ತೆರಳಿ ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಿ.

 

No Comments

Leave A Comment