ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ ಸ೦ಪನ್ನ…

ಉಡುಪಿ:ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಜಿ ಎಸ್ ಬಿ ಸಮಾಜ ಯುವಕ , ಮಹಿಳಾ ಮಂಡಳಿಯ ಆಶ್ರಯದಲ್ಲಿ ಕಾರ್ತಿಕ ಮಾಸದ ಏಕಾದಶಿ ಅಂಗವಾಗಿ ಇ೦ದು ಗುರುವಾರ ಭಜನಾ ಕಾರ್ಯಕ್ರಮವನ್ನು ಹಾಗೂ ಇಂದು ಶುಕ್ರವಾರ ಮುಂಜಾನೆ ಶ್ರೀ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ “ವಿಶ್ವ ರೂಪ ದರ್ಶನ” ಕಾರ್ಯಕ್ರಮವು ನೆರವೇರಿತು.

ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಶ್ರೀ ರಾಮ ದರ್ಶನ , ವೀರ ವಿಠಲ , ಶ್ರೀ ಕೃಷ್ಣ , ಗಜವದನ , ಈಶ್ವರ , ಮುಖ್ಯಪ್ರಾಣ ಹಾಗೂ ರಂಗೋಲಿಯಲ್ಲಿ ವಿವಿಧ ಬಗೆಯ ಚಿತ್ತಾರ , ಹೂಗಳಿಂದ ರಚಿಸಿದ ರಂಗೋಲಿ ,ಹಣತೆಯ ದೀಪದಿಂದ ಓಂ , ಸ್ವಸ್ತಿಕ್, ಶಂಖ ಚಕ್ರ ಗಳನ್ನು ರಚಿಸಲಾಯತು. ಶ್ರೀ ದೇವರಿಗೆ ವಿಶೇಷ ಅಲಂಕಾರ , ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನೆಡೆಯಿತು , ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ಶ್ರೀ ದೇವರ ದರ್ಶನ ಪಡೆದರು ಧನ್ಯರಾದರು

ಧಾರ್ಮಿಕ ಪೂಜಾವಿಧಾನಗನ್ನು ಅರ್ಚಕ ರಾದ ವಿನಾಯಕ ಭಟ್ , ದಯಾಘನ್ ಭಟ್ ನೆರವೇರಿಸಿದರು.

ದೇವಳದ ಆಡಳಿತ ಮೊಕ್ತೇಸರ ಪಿ ವಿ ಶೆಣೈ , ನರಸಿಂಹ ಕಿಣೆ , ಭಾಸ್ಕರ್ ಶೆಣೈ , ಪ್ರದೀಪ್ ರಾವ್ , ದೀಪಕ್ ಭಟ್ , ಜಿ ಎಸ್ ಬಿ ಯುವಕ ಮಂಡಲದ ಅಧ್ಯಕ್ಷ ನಿತೇಶ್ ಶೆಣೈ , ವಿಶಾಲ್ ಶೆಣೈ ,ಉಮೇಶ್ ಪೈ , ನರಹರಿ ಪೈ , ಗಿರೀಶ ಭಟ್ , ಸತೀಶ್ ಕಿಣಿ , ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ ಮತ್ತು ಮಹಿಳಾ ಮಂಡಳಿ ಸದಸ್ಯರು , ಹಾಗೂ ನೂರಾರು ಸಮಾಜಭಾಂದವರು ಉಪಸ್ಥರಿದ್ದರು

No Comments

Leave A Comment