ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಹಿಟ್ ಆ್ಯಂಡ್ ರನ್: ಪೊಲೀಸ್ ಅಧಿಕಾರಿಯ ಪುತ್ರ, 9 ವರ್ಷದ ಬಾಲಕ ಮೃತ್ಯು
ಲಕ್ನೋ:ನ.22: ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ 9 ವರ್ಷದ ಬಾಲಕ ಮೃತಪಟ್ಟ ಘಟನೆ ಲಕ್ನೋದಲ್ಲಿ ನಡೆದಿದೆ. ಮೃತ ಬಾಲಕ ಉತ್ತರ ಪ್ರದೇಶ ಪೊಲೀಸ್‌ನ ವಿಶೇಷ ತನಿಖಾ ತಂಡದಲ್ಲಿ ಎಸ್‌ಐಟಿ ನೇಮಕಗೊಂಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಶ್ವೇತಾ ಶ್ರೀವಾಸ್ತವ್ ಪುತ್ರನಾಗಿದ್ದಾನೆ.
ಲಕ್ನೋದ ಗೋಮ್ತಿನಗರ ವಿಸ್ತಾರ್‌ನಲ್ಲಿರುವ ಜನೇಶ್ವರ ಮಿಶ್ರಾ ಪಾರ್ಕ್‌ನ ಹೊರಗೆ ಪೊಲೀಸ್ ಅಧಿಕಾರಿಯಾಗಿರುವ ತಾಯಿಯ ಮುಂದೆಯೇ ನಡೆದಿದೆ. ಮೃತ ಬಾಲಕ ನೈಮಿಶ್ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ (ಗೋಮತಿ ನಗರ ಶಾಖೆ) 3 ನೇ ತರಗತಿ ಓದುತ್ತಿದ್ದ. ಪ್ರಾಥಮಿಕ ತನಿಖೆಯ ಪ್ರಕಾರ ನೈಮಿಶ್ ಅವರು ಪಾರ್ಕ್ ಗೇಟ್‌ನ ಹೊರಗೆ ಸ್ಕೇಟಿಂಗ್ ಅಭ್ಯಾಸ ಮಾಡುತ್ತಿದ್ದಾಗ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಗು ಮೃತಪಟ್ಟಿದೆ. ಶ್ವೇತಾ ಶ್ರೀವಾಸ್ತವ ತನ್ನ ಮಗನನ್ನು ಸ್ಕೇಟಿಂಗ್ ಅಕಾಡೆಮಿಗೆ ಕರೆದೊಯ್ದಿದ್ದರು, ಘಟನೆ 5.25ರ ಸುಮಾರಿಗೆ ನಡೆದಿದೆ .
ಘಟನೆ ನಡೆಯುವ ವೇಳೆ ಬಾಲಕ ನೈಮಿಶ್ ಕೋಚ್ ಗೌರವ್ ಕುಮಾರ್ ಕೂಡ ಜೊತೆಗಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪಘಾತದ ಪರಿಣಾಮವು ತೀವ್ರವಾಗಿದ್ದು, ಬಾಲಕ 15 ಅಡಿ ದೂರಕ್ಕೆ ಎಸೆಯಲ್ಲಟ್ತಿದ್ದು, SUVಕಾರು ತಕ್ಷಣ ಪರಾರಿಯಾಗಿದೆ.
ವಾಹನದಲ್ಲಿ ಸಾರ್ಥಕ್ ಸಿಂಗ್ ಹಾಗೂ ಆತನ ಸ್ನೇಹಿತ ದೇವಶ್ರೀ ವರ್ಮಾ ಇದ್ದರು ಇಬ್ಬರೂ ಕೂಡ ವಿದ್ಯಾರ್ಥಿಗಳು. ತೀವ್ರ ಹುಡುಕಾಟದ ಬಳಿಕ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 279 (ಅಜಾಗರೂಕ ಚಾಲನೆ) ಮತ್ತು 304-ಎ (ನಿರ್ಲಕ್ಷ್ಯದ ಚಾಲನೆಯಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 150ನ ಕಿ.ಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಸಾರ್ಥಕ್ ಸಿಂಗ್ ಅವರು ಬಾರಾಬಂಕಿಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯನ ಪುತ್ರನಾಗಿದ್ದರೆ, ದೇವಶ್ರೀ ವರ್ಮಾ ಉದ್ಯಮಿ ಕುಟುಂಬಕ್ಕೆ ಸೇರಿದವರು.
ವರ್ಮಾ ಅವರು ಸೋಮವಾರ ರಾತ್ರಿ ಕಾನ್ಪುರದ ಆಭರಣ ವ್ಯಾಪಾರಿ ಅನ್ಶುಲ್ ವರ್ಮಾ ಅವರ ಚಿಕ್ಕಪ್ಪನಿಂದ ಎಸ್‌ಯುವಿಯನ್ನು ತೆಗೆದುಕೊಂಡು ಬಂದಿದ್ದ. ಮಂಗಳವಾರ ಬೆಳಗ್ಗೆ ಅದನ್ನು ರೈಡ್‌ಗೆ ತೆಗೆದುಕೊಂಡು ಹೋಗಿದ್ದರು.