ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಐ ಟಿ-ಈಡಿಗೆ ಹೆದರಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಡಿಕೆಶಿ ವಿರುದ್ಧ ಸುಳ್ಳು ಹೇಳಿಕೆ ನೀಡುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ-ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ: ರಾಜ್ಯದ ಮಾಜಿ ಮುಖ್ಯಮಂತ್ರಿಯಾದ ಮಾನ್ಯ ಕುಮಾರಸ್ವಾಮಿಯವರು ಒಬ್ಬ ಸುಳ್ಳ ಎಂಬುದು ಸಾಬೀತಾಗಿದ್ದು ಕೇವಲ ತನ್ನ ಆಸ್ತಿಯನ್ನು ಉಳಿಸಿಕೊಳ್ಳಲು ತನ್ನ ಸ್ವಂತ ಲಾಭಕ್ಕಾಗಿ ಏನ್ ಡಿ ಎ ಜೊತೆ ಶಾಮಿಲ್ಗಾಗಿ ಬಿಜೆಪಿಯ ನಾಯಕರ ಜೊತೆಗೂಡಿ ಕಾಂಗ್ರೆಸ್ ಪಕ್ಷದ ನಾಯಕರನ್ನು ದೂಷಿಸುತ್ತಿದ್ದಾರೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ನಮ್ಮ ರಾಜ್ಯದ ಮತದಾರರು ಸಂಪೂರ್ಣವಾಗಿ ನಿರ್ಲಕ್ಷಿಸಿ ರಾಜ್ಯದ ರಾಜಕೀಯದಿಂದಲೇ ಜೆಡಿಎಸ್ ಪಕ್ಷವನ್ನು ದೂರವಿರಿಸಿದ್ದಾರೆ.
ಇದನ್ನೆಲ್ಲ ಕಂಡ ಕುಮಾರಸ್ವಾಮಿಯವರಿಗೆ ಏನು ಮಾಡಬೇಕೆಂಬುದು ತೋಚದೆ ಹತಾಶರಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕೇವಲ ಪ್ರಚಾರಕ್ಕಾಗಿ ನಮ್ಮ ನಾಯಕರುಗಳ ವಿರುದ್ಧ ಸುಳ್ಳು ಸುಳ್ಳು ಆಪಾದನೆಯನ್ನು ಮಾಡುತ್ತಿದ್ದಾರೆ ನಿಜವಾಗಿಯೂ ಇವರು ಸಾಚಾ ಎಂಬುದಿದ್ದರೆ ಬಿಜೆಪಿಯ ನಾಯಕರ ಜೊತೆ ಯಾತಕ್ಕಾಗಿ ಶಾಮಿಲಾಗಬೇಕಾಗಿತ್ತು .
ತಾವು ಅಕ್ರಮವಾಗಿ ಗಳಿಸಿದಂತ ಆಸ್ತಿಯನ್ನು ಉಳಿಸಿಕೊಳ್ಳಲು ಬಿಜೆಪಿ ನಾಯಕರು ಜೊತೆ ಶಾಮೀಲಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಮೋದಿ ಹಾಗೂ ಅಮಿತ್ ಶಾ ರವರು ಕುಣಿಸಿದಂತೆ ಕುಣಿದು ಸುಳ್ಳು ಹೇಳಿಕೆಗಳನ್ನು ನೀಡುವುದರಲ್ಲಿ ಕಾಲಹರಣವನ್ನು ಮಾಡುತ್ತಿದ್ದಾರೆ.
ಈ ಕುಮಾರಸ್ವಾಮಿ ಅವರ ಕೆಟ್ಟ ಬುದ್ಧಿಯನ್ನು ರಾಜ್ಯದ ಜನರು ಆರ್ಥಿಸಿಕೊಳ್ಳಬೇಕಾಗಿದೆ ಮುಂದೆ ನಡೆಯುವ ಚುನಾವಣೆಯಲ್ಲಿ ಈ ಜೆಡಿಎಸ್ ಪಕ್ಷವನ್ನು ಹಾಗೂ ಬಿಜೆಪಿ ಪಕ್ಷವನ್ನುರಾಜ್ಯದ ಜನ ಸಂಪೂರ್ಣವಾಗಿ ನಿರ್ಲಕ್ಷಿಸಿ ವಿರೋಧಿಸಿ ಅವರಿಗೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.