ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಉತ್ತರಕಾಶಿ ಸುರಂಗ ಕುಸಿತ: ಹೊಸ ಡ್ರಿಲ್ಲಿಂಗ್ ಯಂತ್ರ ಏರ್‌ಲಿಫ್ಟ್ ಗೆ ವಾಯುಪಡೆಯ ಸಿ-17 ವಿಮಾನ ಬಳಕೆ
ಉತ್ತರಾಖಂಡ: ಸಿಲ್ಕ್ಯಾರಾ ಸುರಂಗ ಕುಸಿತ ಸ್ಥಳದಲ್ಲಿ ಸಿಲುಕಿರುವ 40 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಯ ಮಧ್ಯೆ, ಇಂದೋರ್‌ನಿಂದ ಡೆಹ್ರಾಡೂನ್‌ಗೆ ಸುಮಾರು 22 ಟನ್ ಉಪಕರಣಗಳನ್ನು ಏರ್‌ಲಿಫ್ಟ್ ಮಾಡಲು ಭಾರತೀಯ ವಾಯುಪಡೆಯ ಸಿ-17 ಸಾರಿಗೆ ವಿಮಾನವನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪುನರಾರಂಭಿಸಲು ಇಂದು ಶನಿವಾರ ಎರಡನೇ ಅಗೆಯುವ ಯಂತ್ರವನ್ನು ತರಿಸಲಾಗುತ್ತಿದೆ. ನಿನ್ನೆ ರಕ್ಷಣಾ ಕಾರ್ಯಕರ್ತರು ಡ್ರಿಲ್ಲಿಂಗ್ ಯಂತ್ರ ಮೂಲಕ ರಕ್ಷಣಾ ಕಾರ್ಯ ಆರಂಭಿಸಿದಾಗ, ದೊಡ್ಡ ಪ್ರಮಾಣದ ಬಿರುಕು ಧ್ವನಿ ಕೇಳಿದಾಗ ಕೆಲಸವನ್ನು ಸ್ಥಗಿತಗೊಳಿಸಲಾಯಿತು ಎಂದು ರಾಜ್ಯ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ತಿಳಿಸಿದೆ.
ಮಧ್ಯಪ್ರದೇಶದ ಇಂದೋರ್‌ನಿಂದ ಏರ್‌ಲಿಫ್ಟ್ ಮಾಡಲಾದ ಮತ್ತೊಂದು ಉನ್ನತ-ಕಾರ್ಯಕ್ಷಮತೆಯ ಡ್ರಿಲ್ಲಿಂಗ್ ಯಂತ್ರವು ಈಗಾಗಲೇ ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಅದನ್ನು ರಸ್ತೆಯ ಮೂಲಕ ಸಿಲ್ಕ್ಯಾರಾಕ್ಕೆ ಸಾಗಿಸಲಾಗುತ್ತಿದ್ದು, ಅಲ್ಲಿ ಅದನ್ನು ಇಳಿಸಿ ಜೋಡಿಸಿ ರಕ್ಷಣಾ ಕಾರ್ಯ ಕೊರೆಯಲು ನಿಯೋಜಿಸಲಾಗುವುದು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡದ ದರಾಸು ಎಂಬಲ್ಲಿ ನಡೆಯುತ್ತಿರುವ ಸುರಂಗ ಮಾರ್ಗದಡಿ ಸಿಲುಕಿಕೊಂಡವರ ರಕ್ಷಣೆಗೆ ನೆರವಾಗಲು ಐಎಎಫ್ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ.
ಸುರಂಗದ ಒಳಗಿನ 60 ಮೀಟರ್ ಪ್ರದೇಶದಲ್ಲಿ ಹರಡಿರುವ ಕಲ್ಲುಮಣ್ಣುಗಳ ಮೂಲಕ ಹೆವಿ ಡ್ಯೂಟಿ ಆಗರ್ ಯಂತ್ರವು 24 ಮೀಟರ್ ವರೆಗೆ ಕೊರೆಯಿತು. ಈ ಶಬ್ದ ರಕ್ಷಣಾ ತಂಡದಲ್ಲಿ ಭೀತಿ ಮೂಡಿಸಿದೆ. ಯೋಜನೆಯಲ್ಲಿ ತೊಡಗಿರುವ ತಜ್ಞರು ಸುತ್ತಮುತ್ತಲಿನ ಮತ್ತಷ್ಟು ಕುಸಿತದ ಸಾಧ್ಯತೆಯ ಬಗ್ಗೆ ಎಚ್ಚರಿಸಿದ್ದಾರೆ. ಹೀಗಾಗಿ ಕಾರ್ಯಾಚರಣೆಯನ್ನು ನಿನ್ನೆ ಸ್ಥಗಿತಗೊಳಿಸಲಾಗಿತ್ತು.
ಸುರಂಗದೊಳಗೆ ಸಿಲುಕಿರುವ ಜನರು ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಕಾರ್ಮಿಕರು ಎಂದು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಕಳೆದ ಭಾನುವಾರ ಮುಂಜಾನೆ 5.30ರ ಸುಮಾರಿಗೆ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸುವ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದಿದೆ. ಚಾರ್ ಧಾಮ್ ರಸ್ತೆ ಯೋಜನೆಯ ಭಾಗವಾಗಿರುವ ಈ ಸುರಂಗ ನಿರ್ಮಾಣದಿಂದ ಉತ್ತರಕಾಶಿಯಿಂದ ಯಮುನೋತ್ರಿಯವರೆಗಿನ ಪ್ರಯಾಣ 26 ಕಿ.ಮೀನಷ್ಟು ಕಡಿಮೆಯಾಗಲಿದೆ.