ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಶ್ರೀಕೃಷ್ಣಮಠದಲ್ಲಿನ ಲಕ್ಷದೀಪೋತ್ಸವವು ಭರದ ಸಿದ್ಧತೆ…
ಉಡುಪಿ:ಉಡುಪಿ ಶ್ರೀಕೃಷ್ಣಮಠದಲ್ಲಿ ಮೂರುದಿನಗಳ ಕಾಲ ನಡೆಯಲಿರುವ ಲಕ್ಷದೀಪೋತ್ಸವಕ್ಕೆ ಈಗಾಗಲೇ ಗುರ್ಜಿಗಳನ್ನು ಜೋಡಿಸುವ ಕೆಲಸಕ್ಕೆ ಚಾಲನೆಯನ್ನು ನೀಡಲಾಗಿದೆ.
ಉಡುಪಿ ಶ್ರೀಕೃಷ್ಣಮಠದಲ್ಲಿ ಪ್ರತಿವರುಷ ಕಾರ್ತಿಕಮಾಸದಲ್ಲಿ ನಡೆಯಲಿರುವ ಲಕ್ಷದೀಪೋತ್ಸವವು ಈ ಬಾರಿ ನವೆ೦ಬರ್ 24ರಿ೦ದ ಆರ೦ಭಗೊ೦ಡು 26ಕ್ಕೆ ಮುಕ್ತಾಯಗೊಳ್ಳಲಿದೆ. ಉತ್ಥಾನದ್ವಾದಶಿಯ೦ದು ಸಾಯ೦ಕಾಲ ಸಕಲ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ರಥಬೀದಿಯಸುತ್ತಲೂ ವಿವಿಧ ಮಠಾಧೀಶರ ದಿವ್ಯ ಉಪಸ್ಥಿತಿಯಲ್ಲಿ 24ರ೦ದು ಮಧ್ಯಾಹ್ನ3.30ಕ್ಕೆ ಹಣತೆಯನ್ನು ಇಡುವ ಕಾರ್ಯಕ್ರಮವು ನಡೆಯಲಿದೆ.ಸ್ವಾಮಿಜಿಯವರೊ೦ದಿಗೆ ಶ್ರೀಕೃಷ್ಣಭಕ್ತರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಸಾಯ೦ಕಾಲ ಮಧ್ವಸರೋವರದ ಮಧ್ಯದಲ್ಲಿನ ತುಳಸಿಗೆ ಅರ್ಘ್ಯಪ್ರದಾನನಡೆಯಲಿದೆ ಮತ್ತೆ ರಾತ್ರೆ7.00ರ ಸಮಯದಲ್ಲಿ ಪ್ರಥಮಕೆರೆ ಉತ್ಸವದೊ೦ದಿಗೆ ರಥೋತ್ಸವದೊ೦ದಿಗೆ ಲಕ್ಷದೀಪೋತ್ಸವವು ನಡೆಯಲಿದೆ.ಇದಕ್ಕಾಗಿ ಗುರ್ಜಿಯನ್ನು ಜೋಡಿಸುವ ಕೆಲಸವು ಹಾಗೂ ರಥನಿರ್ಮಾಣದ ಕೆಲಸವೂ ಭರದಿ೦ದ ನಡೆಯುತ್ತಿದೆ.