ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಅಮೇರಿಕಾದ ಅಟ್ಲಾಂಟಾದಲ್ಲಿ ನೂತನ ಶ್ರೀಕೃಷ್ಣಮಂದಿರಕ್ಕೆ ಭೂಮಿಪೂಜೆ
ಅಮೇರಿಕ:ವಿಶ್ವಾದ್ಯಂತ ಶ್ರೀಕೃಷ್ಣಭಕ್ತಿ ಪ್ರಸಾರ ದೀಕ್ಷೆಯನ್ನು ಹೊಂದಿರುವ ಪೂಜ್ಯ ಪುತ್ತಿಗೆ ಶ್ರೀಪಾದರು ಇಂದು ಅಮೇರಿಕಾದ ಅಟ್ಲಾಂಟಾ ನಗರದಲ್ಲಿ ಭಕ್ತ ಜನರ ಸಹಕಾರದೊಂದಿಗೆ ಬೃಹತ್ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕಾಗಿ ಖರೀದಿಸಿರುವ 6 ಎಕ್ರೆ ವಿಶಾಲವಾದ ಜಾಗದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದರು .
ಈ ಜಾಗದಲ್ಲಿ ಬೃಹತ್ ಶ್ರೀಕೃಷ್ಣ ಮಂದಿರ ನಿರ್ಮಾಣವಾಗಲಿದ್ದು ತಾವು ಉಡುಪಿ ಶ್ರೇಕೃಷ್ಣನ ಪರ್ಯಾಯ ಮುಗಿಸಿ ಮರಳಿ ಬರುವಷ್ಟರಲ್ಲಿ ಶ್ರೀಕೃಷ್ಣ ಪ್ರತಿಷ್ಠೆಯ ಮೂಲಕ ಮಂದಿರದ ವಿದ್ಯುಕ್ತವಾಗಿ ಉದ್ಘಾಟನೆಯ ಸಂಕಲ್ಪವನ್ನು ಇಲ್ಲಿಯ ಬಕ್ತಜನತೆ ಇರಿಸಿಕೊಂಡಿದ್ದಾರೆ .
ಸಂಕಲ್ಪಿತ ಶ್ರೀಕೃಷ್ಣ ಮಂದಿರದ ಗರ್ಭಗುಡಿಯ ಕೆಳಗೆಡೆ 700 ಶ್ಲೋಕ ಗಳನ್ನು ಕೆತ್ತಿಸಿದ ಇಟ್ಟಿಗೆಗಳನ್ನು ಭಕ್ತರ ಹೆಸರಿನಲ್ಲಿ ಇರಿಸಲಾಗುವುದು.ತನ್ಮೂಲಕ ಶ್ರೀಗಳ ಕೋಟಿಗೀತಾ ಲೇಖನ ಯೋಜನೆಯ ಸ್ಮಾರಕವಾಗಿ ಅಮೇರಿಕಾದಲ್ಲಿ ಈ ಮಂದಿರ ಮೂಡಿ ಬರಲಿದೆ .
ಪೂಜ್ಯ ಶ್ರೀಗಳು ಅಮೇರಿಕಾದಲ್ಲಿ ಸ್ಥಾಪಿಸಿರುವ 11 ಮಠಗಳಲ್ಲಿ ಇದು ಆರನೇಯ ಶಾಖಾ ಮಠ ವಾಗಿದ್ದು ಇದೀಗ ಸಣ್ಣ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ .
ಭೂಮಿ ಪೂಜೆಯ ವೈದಿಕ ಕಾರ್ಯಕ್ರಮಗಳನ್ನು ಉಡುಪಿಯ ಹೆರ್ಗ ವೇದವ್ಯಾಸ ಭಟ್ ರವರು ನೆರವೇರಿಸಿದರು .
ಮಠದ ಪ್ರಧಾನ ಅರ್ಚಕರಾದ ಜಯ ಪ್ರಸಾದ್ ಅಮ್ಮಣ್ಣಾಯ ಮುಂದಾಳುತ್ವದಲ್ಲಿ ನಡೆಯುತ್ತಿರುವ ಈ ಯೋಜನೆಯ ವಿವರವನ್ನು ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯರವರು ವಿವರಿಸಿದರು .
ವಿದ್ವಾನ್ ಶ್ರೀ ಕೇಶವ ರಾವ್ ತಡಿಪಾತ್ರಿ , ಬಾಲಕೃಷ್ಣ ಭಟ್ , ಹರೀಶ್ ಭಟ್ ಅಜಯ್ ,ಮುರಳಿ ,ಶ್ರೀಕಾಂತ್ ಮೊದಲಾಗಿ ನೂರಾರು ಭಕ್ತಜನರು ಈ ಐತಿಹಾಸಿಕ ಭೂಮಿಪೂಜಾ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು.