``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಮಣಿಪಾಲ: ಪ್ಲಾಟ್‌ನ ಎಂಟನೇ ಮಹಡಿಯಿಂದ ಜಿಗಿದು 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಮಣಿಪಾಲ: ನ.7. ಮಣಿಪಾಲ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೋರ್ವಳು ತನ್ನ ಪ್ಲಾಟ್‌ನ 8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೆರ್ಗಾ ಗ್ರಾಮದ ಕೃತಿಕಾ ಎಂಬವರ ಮಗಳು ಪ್ರಜ್ಞಾ (13) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ.

ಪ್ರಜ್ಞಾ ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಹೆರ್ಗಾ ಗ್ರಾಮದ ಸರಳೇಬೆಟ್ಟು ಹೈಪಾಯಿಂಟ್‌ ಹೈಟ್ಸ್‌ ಟೆರೇಸ್‌ನಿಂದ ನ.5 ರಂದು ಬೆಳಿಗ್ಗೆ 6.20ಕ್ಕೆ ಎಂಟನೇ ಮಹಡಿಯಿಂದ ಹಾರಿದ್ದಳು. ತಕ್ಷಣ ಮನೆಯವರು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಗಂಭೀರ ಗಾಯಗೊಂಡ ಪ್ರಜ್ಞಾ ಚಿಕಿತ್ಸೆಗೆ ಸ್ಪಂದಿಸದೇ ಸಂಜೆ 7:45 ಗಂಟೆಗೆ ಕೊನೆಯುಸಿರೆಳೆದಿದ್ದಾಳೆ ಎಂದು ಮಣಿಪಾಲ ಪೊಲೀಸರು ಮಾಹಿತಿ ನೀಡಿದ್ದಾರೆ.

No Comments

Leave A Comment