ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಶತಾಯುಷಿ ವಿದ್ವಾನ್ ಅಂಗಡಿ ಮಾರು ಕೃಷ್ಣಭಟ್ಟರು ಅಸ್ತಂಗತ

ಉಡುಪಿ: ಶ್ರೀ ಪೇಜಾವರಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಪೂರ್ವಾಶ್ರಮದ ತೀರ್ಥರೂಪರೂ , ಹಿರಿಯ ಸಂಸ್ಕೃತ ಮತ್ತು ತುಳು ಭಾಷಾ ವಿದ್ವಾಂಸ ಅಂಗಡಿಮಾರು ಕೃಷ್ಣ ಭಟ್ಟರು ಭಾನುವಾರ ರಾತ್ರಿ ವಯೋಸಹಜ ಅಸ್ವಾಸ್ಥ್ಯದಿಂದ ನಿಧನರಾಗಿದ್ದಾರೆ .

(105 ವರ್ಷ) ತುಳು ಭಾಷೆಯ ಸೌರ ಪಂಚಾಂಗವನ್ನು ಅತ್ಯಂತ ಶ್ರದ್ಧೆಯಿಂದ ಅನೇಕ ವರ್ಷಗಳಿಂದ ರಚಿಸಿ ಪ್ರಕಟಿಸುತ್ತಿದ್ದರು . ಸಂಪ್ರದಾಯ ಸದಾಚಾರ ನಿಷ್ಠರೂ ಅಪಾರ ದೈವಭಕ್ತರೂ ಆಗಿದ್ದ ಅವರಿಗೆ ಮಂಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಮಠಾಧೀಶರು ಸಂಘ ಸಂಸ್ಥೆಗಳಿಂದ ಗೌರವ ಪುರಸ್ಕಾರಗಳು ಸಂದಿವೆ . ಶ್ರೀಯುತ ಭಟ್ಟರು ಐವರು ಸುಪುತ್ರರು ಮತ್ತು ಆರು ಪುತ್ರಿಯರನ್ನು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ .‌

kiniudupi@rediffmail.com

No Comments

Leave A Comment