ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಶತಾಯುಷಿ ವಿದ್ವಾನ್ ಅಂಗಡಿ ಮಾರು ಕೃಷ್ಣಭಟ್ಟರು ಅಸ್ತಂಗತ
ಉಡುಪಿ: ಶ್ರೀ ಪೇಜಾವರಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಪೂರ್ವಾಶ್ರಮದ ತೀರ್ಥರೂಪರೂ , ಹಿರಿಯ ಸಂಸ್ಕೃತ ಮತ್ತು ತುಳು ಭಾಷಾ ವಿದ್ವಾಂಸ ಅಂಗಡಿಮಾರು ಕೃಷ್ಣ ಭಟ್ಟರು ಭಾನುವಾರ ರಾತ್ರಿ ವಯೋಸಹಜ ಅಸ್ವಾಸ್ಥ್ಯದಿಂದ ನಿಧನರಾಗಿದ್ದಾರೆ .
(105 ವರ್ಷ) ತುಳು ಭಾಷೆಯ ಸೌರ ಪಂಚಾಂಗವನ್ನು ಅತ್ಯಂತ ಶ್ರದ್ಧೆಯಿಂದ ಅನೇಕ ವರ್ಷಗಳಿಂದ ರಚಿಸಿ ಪ್ರಕಟಿಸುತ್ತಿದ್ದರು . ಸಂಪ್ರದಾಯ ಸದಾಚಾರ ನಿಷ್ಠರೂ ಅಪಾರ ದೈವಭಕ್ತರೂ ಆಗಿದ್ದ ಅವರಿಗೆ ಮಂಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಮಠಾಧೀಶರು ಸಂಘ ಸಂಸ್ಥೆಗಳಿಂದ ಗೌರವ ಪುರಸ್ಕಾರಗಳು ಸಂದಿವೆ . ಶ್ರೀಯುತ ಭಟ್ಟರು ಐವರು ಸುಪುತ್ರರು ಮತ್ತು ಆರು ಪುತ್ರಿಯರನ್ನು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ .